'ಜಿಡಿಪಿ' ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ: ರಾಹುಲ್ ಗಾಂಧಿ
ನವದೆಹಲಿ, ಸೆಪ್ಟೆಂಬರ್ 1: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ತತ್ತರಿಸಿದ್ದಾರೆ.
ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 21ರಷ್ಟು ಜಿಡಿಪಿ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ. ಜಿಡಿಪಿ ಏರಿಕೆಗೆ ರಾಹುಲ್ ಗಾಂಧಿ ಹೊಸ ಪರಿಕಲ್ಪನೆ ನೀಡಿದ್ದಾರೆ.

ರಾಹುಲ್ ಗಾಂಧಿ ಪ್ರಕಾರ, "ಜಿಡಿಪಿ ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಎಂದು ಹೇಳಿದ್ದಾರೆ. "ಜಿಡಿಪಿ ಏರುತ್ತಿದೆ ಎಂದು ಮೋದಿ ಜೀ ಹೇಳುತ್ತಲೇ ಇದ್ದಾರೆ, ಜಿಡಿಪಿ ಮೇಲ್ಮುಖವಾಗಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಜಿಡಿಪಿ- ಇದರ ಅರ್ಥವೇನೆಂದು ನನಗೆ ಈಗ ಅರ್ಥವಾಯಿತು. ಇದರ ಅರ್ಥ 'ಗ್ಯಾಸ್- ಡೀಸೆಲ್- ಪೆಟ್ರೋಲ್' ಏರಿಕೆ. ಅವರಿಗೆ ಈ ಗೊಂದಲವಿದೆ,'' ಎಂದು ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
"2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರವನ್ನು ತೊರೆದಾಗ, ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಪ್ರತಿ ಸಿಲಿಂಡರ್‌ಗೆ 410 ರೂ. ಮಾತ್ರ ಆಗಿತ್ತು," ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
"ರೈತರು, ಸಂಬಳ ಪಡೆಯುವ ವರ್ಗ ಮತ್ತು ಕಾರ್ಮಿಕರಿಗೆ ನೋಟು ರದ್ದತಿ ಮಾಡಲಾಗುತ್ತಿದ್ದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಣ ಗಳಿಸುವಂತೆ ಮಾಡುತ್ತಿದ್ದಾರೆ," ಎಂದು ರಾಹುಲ್ ಗಾಂಧಿ ಆರೋಪಿಸಿದರು.
"ಒಂದೆಡೆ ನೋಟು ರದ್ದತಿ ಮತ್ತು ಇನ್ನೊಂದೆಡೆ ಹಣ ಗಳಿಕೆ ಇದೆ. ಯಾರ ನೋಟು ರದ್ದತಿ ನಡೆಯುತ್ತಿದೆ ಎಂದರೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಅನೌಪಚಾರಿಕ ವಲಯ, MSMEಗಳು, ಗುತ್ತಿಗೆ ಕಾರ್ಮಿಕರು, ಸಂಬಳದ ವರ್ಗ ಮತ್ತು ಪ್ರಾಮಾಣಿಕ ಕೈಗಾರಿಕೋದ್ಯಮಿಗಳು. ಯಾರು ಹಣ ಗಳಿಕೆ ಮಾಡುತ್ತಿದ್ದಾರೆ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕೈದು ಸ್ನೇಹಿತರದ್ದು ಮಾತ್ರ," ಎಂದು ವ್ಯಂಗ್ಯವಾಗಿ ಟೀಕಿಸಿದರು.
ಮಂಗಳವಾರದಂದು ಟ್ವೀಟ್ ಮಾಡಿದ್ದ ರಾಹುಲ್, India against BJP loot ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ, "ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗಲು ಒತ್ತಾಯಿಸುವವನು ಸ್ವತಃ ಸ್ನೇಹಿತರ ನೆರಳಿನಲ್ಲಿ ಮಲಗುತ್ತಾನೆ. ಆದರೆ ದೇಶವು ಅನ್ಯಾಯದ ವಿರುದ್ಧ ಒಂದಾಗುತ್ತಿದೆ," ಎಂದು ಬರೆದುಕೊಂಡಿದ್ದರು.
ಕಾಂಗ್ರೆಸ್ ಪಕ್ಷವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ಸಲುವಾಗಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಕೇಂದ್ರ ಸರ್ಕಾರ ವಿಧಿಸಿರುವ ಕೆಲವು ತೆರಿಗೆಗಳನ್ನು ತೆಗೆದು ಹಾಕುವ ಮೂಲಕ ಅವುಗಳನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದೆ.
ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿಗೆ ಈಗ ತೈಲ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‌ಗೆ 884.50 ರೂ. ಆಗಿದೆ. ಎರಡು ತಿಂಗಳಲ್ಲಿ ಇದು ಮೂರನೇ ಬಾರಿ ದರ ಹೆಚ್ಚಾಗಿದೆ.
ಜುಲೈ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರಗಳನ್ನು ಪ್ರತಿ ಸಿಲಿಂಡರ್‌ಗೆ 25.50 ರೂ. ಏರಿಕೆ ಮಾಡಲಾಗಿತ್ತು. ಸಬ್ಸಿಡಿ ಎಲ್‌ಪಿಜಿ ಬೆಲೆಯಲ್ಲಿ ಇತ್ತೀಚಿನ ಹೆಚ್ಚಳವು ಜನವರಿ 1 ರಿಂದ ಸಿಲಿಂಡರ್‌ಗೆ 190 ರೂ. ಏರಿಕೆಯಾಗಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications