370 ರದ್ದು: ಯಾವ ಪಕ್ಷ ಬೆಂಬಲಿಸಿತು, ಯಾವುದು ಇಲ್ಲ?

ನವದೆಹಲಿ, ಆಗಸ್ಟ್‌ 05: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ ಮಾನ ಇಂದು ರದ್ದಾಗಿದೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದ ಐತಿಹಾಸಿಕ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುತ್ತಿದ್ದ ಸಂವಿಧಾನದ 370 ಹಾಗೂ ಆರ್ಟಿಕಲ್ 35ಎ ಯನ್ನು ರದ್ದು ಮಾಡುವ ಪ್ರಸ್ತಾಪವನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸದನದ ಮುಂದೆ ಇರಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಎನ್ ಡಿಎ ಸರ್ಕಾರದ ನಡೆಯನ್ನು ಎನ್‌ಡಿಎ ಮಿತ್ರ ಪಕ್ಷಗಳೇ ಕೆಲವು ವಿರೋಧಿಸಿದ್ದರೆ, ಎನ್‌ಡಿಎಯ ವಿರೋಧಿ ಪಕ್ಷಗಳಲ್ಲಿ ಕೆಲವು ಈ ನಡೆಯನ್ನು ಸ್ವಾಗತಿಸಿವೆ.

In parliament Which politica parties supported 370 scrap

ಜಮ್ಮು ಕಾಶ್ಮೀರ ವಿಶೇಷ ಸ್ಥಾನ ಮಾನ ರದ್ದು ಮಾಡುವ ಪ್ರಸ್ತಾಪಕ್ಕೆ ಪರವಾಗಿ ಬಿಜೆಪಿ ಸೇರಿದಂತೆ ಬಿಜು ಜನತಾ ದಳ (ಬಿಜೆಡಿ), ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ), ವೈಎಸ್‌ಆರ್‌ಸಿಪಿ (ವೈಎಸ್‌ಆರ್ ಕಾಂಗ್ರೆಸ್), ಟಿಡಿಪಿ (ತೆಲುಗುದೇಶಂ ಪಕ್ಷ), ಶಿವಸೇನಾ, ಆಮ್ ಆದ್ಮಿ ಪಾರ್ಟಿ (ಎಎಪಿ), ತೆಲುಗು ರಾಷ್ಟ್ರ ಸಮಿತಿ (ಟಿಆರ್‌ಎಸ್‌) , ಅಕಾಲಿ ದಳ ಪಕ್ಷಗಳು ಬೆಂಬಲ ಸೂಚಿಸಿವೆ.

ಮಸೂದೆಗೆ ವಿರೋಧವಾಗಿ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌, ಕಾಂಗ್ರೆಸ್, ಜಮ್ಮು ಕಾಶ್ಮೀರ ಪೀಪಲ್ಸ್‌ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಕಾಂಗ್ರೆಸ್, ಜೆಡಿ(ಯು) ಜನತಾ ದಳ ಯೂನಿಯನ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ ಮುನ್ನೇಟ್ರ ಕಲಗಂ (ಡಿಎಂಕೆ), ಕಮ್ಯೂನಿಸ್ಟ್‌ ಪಕ್ಷ (ಸಿಪಿಎಂ) ವಿರೋಧಿಸಿವೆ.

ಅಚ್ಚರಿಯ ರೀತಿಯಲ್ಲಿ ಬಿಜೆಪಿಯ ವಿರೋಧಿಗಳಾದ ಬಿಎಸ್‌ಪಿ, ಎಎಪಿ, ಟಿಡಿಪಿ ಪಕ್ಷಗಳು 370 ರದ್ದಿಗೆ ಬೆಂಬಲ ಸೂಚಿಸಿದೆ. ಇನ್ನು ಎನ್‌ಡಿಎ ಭಾಗವಾಗಿದ್ದ ಜೆಡಿ(ಯು) ಪಕ್ಷವು ಮಸೂದೆಗೆ ವಿರುದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+