ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ

ನವದೆಹಲಿ, ಮೇ 29: ವ್ಯಕ್ತಿಯೊಬ್ಬ ಬಂದೂಕು ತೋರಿಸಿ ಬಲವಂತವಾಗಿ ಮದುವೆಯಾಗಿ, ಪಾಕಿಸ್ತಾನದಲ್ಲಿದ್ದ ಉಜ್ಮಾಳನ್ನು ರಕ್ಷಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮತ್ತೊಂದು ಮನವಿ ಬಂದಿದೆ. ಪಾಕಿಸ್ತಾನದಲ್ಲಿ ಹಿಂಸೆ ಅನುಭವಿಸುತ್ತಿರುವ ನಮ್ಮ ಮಗಳನ್ನು ವಾಪಸ್ ಕರೆತರಲು ನಮಗೆ ನೆರವಾಗಿ ಎಂದು ಹೈದರಾಬಾದ್ ನ ದಂಪತಿ ಮನವಿ ಮಾಡಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಪಾಕಿಸ್ತಾನದಲ್ಲಿರುವ ನಮ್ಮ ಮಗಳು ಮಹಮ್ಮದಿ ಬೇಗಮ್ ಳಿಗಾಗಿ ಕಾಯುತ್ತಿದ್ದೇವೆ. ಹಲವು ವರ್ಷಗಳಿಂದ ಅವಳು ಭಾರತಕ್ಕೆ ಬಂದಿಲ್ಲ. ಈ ಬಾರಿ ರಂಜಾನ್ ಆದರೂ ಆಕೆಯ ಜೊತೆ ಕಳೆಯಬೇಕು ಅಂದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.[ಪಾಕಿಸ್ತಾನದಿಂದ ಭಾರತಕ್ಕೆ ಉಜ್ಮಾಳನ್ನು ಕರೆತಂದ ರೋಚಕ ಕತೆ]

Hyderabad couple request Sushma swaraj to bring back their daughter from Pakistan

ಪಾಕಿಸ್ತಾನದ ಮೊಹಮ್ಮದ್ ಯೂನಸ್ ಎಂಬುವವನು ಒಮನ್ ನಲ್ಲಿ ಕೆಲಸ ಮಾಡುವಾಗ ನಮ್ಮ ಮಗಳನ್ನು ಮದುವೆಯಾಗಿ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಆತ ಅಲ್ಲಿ ಹಿಂಸೆ ನೀಡುತ್ತಿದ್ದು, ಮನೆ ಕೆಲಸದವಳ ರೀತಿ ನಡೆಸಿಕೊಳ್ಳುತ್ತಿದ್ದಾನೆ. ತನ್ನನ್ನು ಕರೆಸಿಕೊಳ್ಳಿ ಎಂದು ನಮ್ಮ ಮಗಳು ಕರೆ ಮಾಡುತ್ತಿದ್ದಾಳೆ. ಅವಳನ್ನು ಕಾಪಾಡಿ ಎಂದು ಆಕೆಯ ತಂದೆ ಮಹಮ್ಮದ್ ಅಕ್ಬರ್ ಮನವಿ ಮಾಡಿದ್ದಾರೆ.[ಪಾಕಿಸ್ತಾನಕ್ಕೆ ಹೋಗುವುದು ಸರಳ, ವಾಪಸ್ ಬರುವುದು ಕಷ್ಟ : ಉಜ್ಮಾ]

ಇಸ್ಲಾಮಾಬಾದ್ ನಲ್ಲಿ ಇರುವ ರಾಯಭಾರ ಕಚೇರಿಯಿಂದ ನಮಗೆ ಭರವಸೆ ದೊರಕಿದ್ದು, ಮಹಮ್ಮದಿ ಬೇಗಮ್ ಳನ್ನು ಶೀಘ್ರದಲ್ಲಿ ಭಾರತಕ್ಕೆ ಕಳಿಸುವುದಾಗಿ ತಿಳಿಸಿರುವುದಾಗಿ ಅಕ್ಬರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+