ದೇಶದಲ್ಲಿ ಆರು ಲಸಿಕೆಗಳು ಪ್ರಯೋಗದ ಹಂತದಲ್ಲಿ

ನವದೆಹಲಿ, ಡಿಸೆಂಬರ್ 8: ಮುಂದಿನ ಕೆಲವು ವಾರಗಳಲ್ಲಿ ಹಲವು ಕೊರೊನಾ ವೈರಸ್ ಲಸಿಕೆಗಳಿಗೆ ಭಾರತ ಅನುಮತಿ ನೀಡುವ ಸಾಧ್ಯತೆ ಇದ್ದು, ಮೊದಲ ಹಂತದಲ್ಲಿ ಅಂದಾಜು 300 ಮಿಲಿಯನ್ ಜನರು ಲಸಿಕೆಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹಿರಿಯ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಅನೇಕ ಲಸಿಕೆಗಳು ಅಭಿವೃದ್ಧಿಯ ವಿಭಿನ್ನ ಹಂತಗಳಲ್ಲಿವೆ. ಇವುಗಳಲ್ಲಿ ಕೆಲವು ಮುಂದಿನ ವಾರಗಳಲ್ಲಿ ಬಳಕೆಗೆ ಪರವಾನಗಿ ಪಡೆದುಕೊಳ್ಳಬಹುದು' ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಅಮೆರಿಕದ ಫೈಜರ್ ಇಂಕ್ ಭಾರತದಲ್ಲಿ ಲಸಿಕೆಯ ತುರ್ತು ಬಳಕೆಯ ಅನುಮತಿಗೆ ಕೋರಿತ್ತು. ಬಳಿಕ ಆಸ್ಟ್ರಾಜೆನಿಕಾದ ಸಹಯೋಗದಲ್ಲಿ ಭಾರತದಲ್ಲಿ ತಯಾರಿಸುತ್ತಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಯ ಅನುಮತಿಗೆ ಸೆರಮ್ ಸಂಸ್ಥೆ ಕೂಡ ಮನವಿ ಮಾಡಿತ್ತು. ಈಗ ಸಂಪೂರ್ಣ ಸ್ವದೇಶಿ ನಿರ್ಮಿತ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೂ ಮನವಿ ಮಾಡಲಾಗಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

Health Secretary Says Six Covid-19 Vaccines In Trial Stages

ಆರೋಗ್ಯ ಕಾರ್ಯಕರ್ತರು, ಪೊಲೀಸರು, 50 ವರ್ಷ ಮೇಲಿನ ನಾಗರಿಕರು ಸೇರಿದಂತೆ ಕೇಂದ್ರ ಸರ್ಕಾರ ಸುಮಾರು 300 ಮಿಲಿಯನ್ ಜನರನ್ನು ಗುರುತಿಸಿದೆ. ಅವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆಯ ಅಗತ್ಯವಿರುವ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ನೀಡಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.

ಇನ್ನೂ ಆರು ಲಸಿಕೆಗಳು ಪರೀಕ್ಷೆಯ ಹಂತದಲ್ಲಿವೆ. ಲಸಿಕೆ ಕಾರ್ಯಾಚರಣೆ ನಡೆಸಲು 1,54,000ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಭಾರತದಲ್ಲಿ ಮೊದಲು 30ಕೋಟಿ ಜನರಿಗೆ ಲಸಿಕೆ ನೀಡಲು ಸಾಲುವಷ್ಟು ಶೈತ್ಯ ವ್ಯವಸ್ಥೆ ಹೊಂದಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+