ಸಾಕು ನಾಯಿ ಹುಡುಕಿಕೊಟ್ಟವಳಿಗೆ ಸಿಕ್ಕಿದ್ದ ಬಹುಮಾನ 2 ಲಕ್ಷ ರು.!
ಗುರ್ ಗಾಂವ್, ಮೇ 9: ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ಸಾಕು ನಾಯಿಯನ್ನು ಹುಡುಕಿಕೊಟ್ಟ ಹುಡುಗಿಯೊಬ್ಬಳಿಗೆ ಅದರ ಮಾಲೀಕರು ನೀಡಲು ಹೊರಟಿದ್ದು 2 ಲಕ್ಷ ರು.! ಆದರೆ, ಆ ಹುಡುಕಿಕೊಟ್ಟ ಹುಡುಗಿ ಅದನ್ನು ನಯವಾಗಿ ತಿರಸ್ಕರಿಸಿ ಮೇರು ಗುಣ ಪ್ರದರ್ಶಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ವರ್ಷ ಜನವರಿಯಿಂದ ಆಸ್ಟ್ರೇಲಿಯಾ ಮೂಲದ ವೆನಸ್ ಗ್ರೀನ್ ಹಾಗೂ ರಿಕ್ ಗ್ರೀನ್ ಎಂಬ ದಂಪತಿಗಳು ಗುರ್ ಗಾಂವ್ ನ ಐರಿಯೋ ಅಪ್ ಟೌನ್ ಸೆಕ್ಟರ್ 66ನಲ್ಲಿ ವಾಸವಾಗಿದ್ದಾರೆ. ಆದರೆ, ಅವರ ಸಾಕು ನಾಯಿಯಾದ ರೆಕ್ಸಿ ಭಾನುವಾರ (ಮೇ 7ರಿಂದ) ಕಾಣೆಯಾಗಿತ್ತು. ಆಗ, ಆ ದಂಪತಿ ಊರೆಲ್ಲಾ ಪೋಸ್ಟರ್ ಅಂಟಿಸಿದ್ದಲ್ಲದೆ, ನಾಯಿ ಹುಡುಕಿಕೊಟ್ಟವರಿಗೆ 2 ಲಕ್ಷ ರು. ಇನಾಮು ನೀಡುವುದಾಗಿಯೂ ಹೇಳಿದ್ದರಂತೆ.

ಪೋಸ್ಟರ್ ನೋಡಿದವರು ಹಲವಾರು ಮಂದಿ ಆಸೀಸ್ ದಂಪತಿಗೆ ಫೋನು ಮಾಡಿ ಕೆಲವಾರು ನಾಯಿಗಳ ಬಗ್ಗೆ ಮಾಹಿತಿ ದೊರೆತರೂ ಅವು ತಮ್ಮ ರೆಕ್ಸಿ ಅಲ್ಲ ಎಂಬುದು ಈ ದಂಪತಿಯನ್ನು ಮತ್ತಷ್ಟು ಕಂಗೆಡಿಸಿತ್ತು.
ಆದರೆ, ಮಂಗಳವಾರ ಮಧ್ಯಾಹ್ನ ಭಾರತದ ಮೂಲದ ಜಾತಿಯ ಈ ನಾಯಿಯನ್ನು ಸಿಸ್ಪಾಲ್ ವಿಹಾರ್ ನ 49ನೇ ಸೆಕ್ಟರ್ ನಲ್ಲಿ ವಾಸವಿರುವ ಹುಡುಗಿಯೊಬ್ಬಳು ಹುಡುಕಿ ತಂದುಕೊಟ್ಟಿದ್ದಾಳೆ.
ಇದರಿಂದ ಸಂತುಷ್ಟರಾದ ಆಸೀಸ್ ದಂಪತಿ, ಆ ಹುಡುಗಿಗೆ ಮೊದಲೇ ಘೋಷಿಸಿದ್ದಂತೆ 2 ಲಕ್ಷ ರು. ಇನಾಮು ನೀಡಲು ಮುಂದಾದರೆ ಆ ಹುಡುಗಿ ಅದನ್ನು ನಿರಾಕರಿಸಿದ್ದಾಳಂತೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications