ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ

ನವದೆಹಲಿ, ಡಿಸೆಂಬರ್ 18 : ಜೋಡಿಸಿಟ್ಟ ಕಲ್ಲುಗಳ ಸ್ಟಂಪ್‌, ಕಚ್ಚಾ ಮರದ ತುಂಡಿನ ಬ್ಯಾಟ್ ಮತ್ತು ಟೆನಿಸ್‌ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಗುರುವಾರ ಮರೆಯಲಾರದ ದಿನ. ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚೈ ಅವರು ಯುವಕರೊಂದಿಗೆ ಸೇರಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಭಾರತ ಪ್ರವಾಸದಲ್ಲಿರುವ ಗೂಗಲ್‌ನ ಸಿಇಒ ಭಾರತೀಯ ಮೂಲದ ಸುಂದ್ ಪಿಚೈ ಅವರು, ದೆಹಲಿಯ ಗೇಟ್‌ ವೇ ಆಫ್ ಇಂಡಿಯಾದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಜೊತೆ ಸೇರಿ ಗುರುವಾರ ಕ್ರಿಕೆಟ್ ಆಡಿದರು. ಹುಡುಗರೊಂದಿಗೆ ಫೋಟೊ ತೆಗೆಸಿಕೊಂಡು ಸಂತಸ ಹಂಚಿಕೊಂಡರು. [ಕ್ರಿಕೆಟರ್ ಆಗಬೇಕಿತ್ತು, ಕೋಡರ್ ಆದೆ ಎಂದ ಸುಂದರ್ ಪಿಚೈ]

ಕ್ರಿಕೆಟ್ ಆಡಿದ ಬಳಿಕ ಶ್ರೀರಾಮ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಪಿಚೈ ಅವರು, ತಮ್ಮ ಕ್ರಿಕೆಟ್ ಪ್ರೀತಿಯನ್ನು ಬಿಚ್ಚಿಟ್ಟರು. ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಕಾರ್ಯಕ್ರಮವನ್ನು ಕ್ರಿಕೆಟ್ ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ನಿರೂಪಣೆ ಮಾಡಿದರು. [ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು]

ಸಂವಾದದಲ್ಲಿ 'ಟೆಸ್ಟ್ ಮತ್ತು ಏಕದಿನ ಮಾದರಿಯ ಕ್ರಿಕೆಟ್‌ ನೋಡುವುದು ನನ್ನ ನೆಚ್ಚಿನ ಹವ್ಯಾಸ. ನನ್ನ ಓದು, ಬರಹಗಳ ನಡುವೆಯೂ ನಾನು ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸಲು ಸಮಯ ಇಡುತ್ತಿದ್ದೆ. ಈಗಲೂ ನನಗೆ ಟೆಸ್ಟ್‌ ಪಂದ್ಯಗಳೆಂದರೆ ಇಷ್ಟ' ಎಂದು ಹೇಳಿದರು. ಪಿಚೈ ಕ್ರಿಕೆಟ್ ಆಡಿದ ಚಿತ್ರಗಳನ್ನು ನೋಡಿ....[ಪಿಟಿಐ ಚಿತ್ರಗಳು]

ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡಿದ ಪಿಚೈ

ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡಿದ ಪಿಚೈ

ಭಾರತ ಪ್ರವಾಸದಲ್ಲಿರುವ ಗೂಗಲ್‌ ಸಿಇಒ ಭಾರತೀಯ ಮೂಲದ ಸುಂದ್ ಪಿಚೈ ಅವರು, ಗುರುವಾರ ದೆಹಲಿಯ ಗೇಟ್‌ ವೇ ಆಫ್ ಇಂಡಿಯಾದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಜೊತೆ ಸೇರಿ ಕ್ರಿಕೆಟ್ ಆಡಿದರು. ಹುಡುಗರೊಂದಿಗೆ ಫೋಟೊ ತೆಗೆಸಿಕೊಂಡು ಸಂತಸ ಹಂಚಿಕೊಂಡರು.

ಕಲ್ಲುಗಳ ಸ್ಟಂಪ್, ಟೆನಿಸ್ ಬಾಲ್

ಕಲ್ಲುಗಳ ಸ್ಟಂಪ್, ಟೆನಿಸ್ ಬಾಲ್

ಜೋಡಿಸಿಟ್ಟ ಕಲ್ಲುಗಳ ಸ್ಟಂಪ್‌, ಕಚ್ಚಾ ಮರದ ತುಂಡಿನ ಬ್ಯಾಟ್ ಮತ್ತು ಟೆನಿಸ್‌ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಗುರುವಾರ ಮರೆಯಲಾರದ ದಿನವಾಯಿತು. ಸುಂದರ್ ಪಿಚೈ ಅವರೊಂದಿಗೆ ಕ್ರಿಕೆಟ್ ಆಡಿ ಅವರು ಸಂಭ್ರಮಿಸಿದರು.

ಕ್ರಿಕೆಟ್ ಪ್ರೀತಿ ಬಿಚ್ಚಿಟ್ಟ ಪಿಚೈ

ಕ್ರಿಕೆಟ್ ಪ್ರೀತಿ ಬಿಚ್ಚಿಟ್ಟ ಪಿಚೈ

ಶ್ರೀರಾಮ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಪಿಚೈ ಅವರು, ತಮ್ಮ ಕ್ರಿಕೆಟ್ ಪ್ರೀತಿಯನ್ನು ಬಿಚ್ಚಿಟ್ಟರು. ಕ್ರಿಕೆಟ್ ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಸಂವಾದ ಕಾರ್ಯಕ್ರಮದ ನಿರೂಪಣೆ ಮಾಡಿದರು. 'ಸುನಿಲ್ ಗಾವಾಸ್ಕರ್ ಅವರ ಆಟವನ್ನು ನಾನು ಬಾಲಕನಾಗಿದ್ದಾಗ ವೀಕ್ಷಿಸುತ್ತಿದ್ದೆ. ನಂತರ ತೆಂಡೂಲ್ಕರ್ ಅವರ ಆಟವನ್ನು ಬಹುವಾಗಿ ಮೆಚ್ಚಿ ಕೊಂಡಿದ್ದೆ. ಅವರಿಬ್ಬರೂ ಅಮೋಘ ಆಟಗಾರರು' ಎಂದು ಪಿಚೈ ಬಣ್ಣಿಸಿದರು.

ಕ್ರಿಕೆಟರ್ ಆಗುವ ಕನಸಿತ್ತು

ಕ್ರಿಕೆಟರ್ ಆಗುವ ಕನಸಿತ್ತು

'ಬಹುತೇಕ ಭಾರತೀಯರಂತೆ ನಾನು ಕೂಡ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರನಾಗುವ ಕನಸು ಕಂಡಿದ್ದೆ. ಟೆಸ್ಟ್ ಮತ್ತು ಏಕದಿನ ಮಾದರಿಯ ಕ್ರಿಕೆಟ್‌ ನೋಡುವುದು ನನ್ನ ನೆಚ್ಚಿನ ಹವ್ಯಾಸ. ಈಗಲೂ ನನಗೆ ಟೆಸ್ಟ್‌ ಪಂದ್ಯಗಳೆಂದರೆ ಇಷ್ಟ. ಟಿ 20 ಮಾದರಿಯ ಕ್ರಿಕೆಟ್‌ ನನಗೆ ಅಷ್ಟು ಹಿಡಿಸುವುದಿಲ್ಲ' ಎಂದು ಹೇಳಿದರು.

ಮೆಸ್ಸಿ ನನ್ನ ಅಚ್ಚುಮೆಚ್ಚಿನ ಆಟಗಾರ

ಮೆಸ್ಸಿ ನನ್ನ ಅಚ್ಚುಮೆಚ್ಚಿನ ಆಟಗಾರ

'ಕ್ರಿಕೆಟ್ ಜೊತೆ ನಾನು ಫುಟ್‌ಬಾಲ್ ಪ್ರೇಮಿಯೋ ಹೌದು. ಬಾರ್ಸಿಲೋನಾದ ಲಯೋನೆಲ್ ಮೆಸ್ಸಿ ನನ್ನ ಅಚ್ಚುಮೆಚ್ಚಿನ ಆಟಗಾರ. ವಿದ್ಯಾರ್ಥಿಯಾಗಿದ್ದಾಗ ಮಧ್ಯ ರಾತ್ರಿಯಲ್ಲಿ ಎದ್ದು ಕುಳಿತು ಟಿವಿಯಲ್ಲಿ ಫುಟ್‌ಬಾಲ್ ಪಂದ್ಯಗಳನ್ನು ನೋಡುತ್ತಿದ್ದೆ. ಬ್ರೆಜಿಲ್ ತಂಡದ ಪಂದ್ಯಗಳನ್ನು ಎಂದೂ ತಪ್ಪಿಸುತ್ತಿರಲಿಲ್ಲ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+