ದೆಹಲಿ: ಮಾಲ್ ನ ಕಾರ್ ಪಾರ್ಕಿಂಗ್ ನಲ್ಲೇ ಯುವತಿ ಮೇಲೆ ಅತ್ಯಾಚಾರ!

ನವದೆಹಲಿ, ಜೂನ್ 21: ದೆಹಲಿಯ ಸಿಟಿ ವಾಕ್ ಮಾಲ್ ನ ಕಾರ್ ಪಾರ್ಕಿಂಗಿನಲ್ಲಿ 24 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಮಾಲ್ ಗಳೂ ಸೇಫ್ ಅಲ್ಲಬವೇ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.

ಘಟನೆ ಜೂನ್ 19 ಸೋಮವಾರದಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಸೋನು ಸಿಂಗ್ ಎಂಬ ಯುವಕ ಈ ಯುವತಿಯೊಂದಿಗೆ ಫೇಸ್ ಬುಕ್ ಮೂಲಕ ಸ್ನೇಹ ಸಂಪಾದಿಸಿದ್ದ. ಕೆಲ ದಿನದ ನಂತರ, ಯುವತಿಗೆ ಬ್ಯಾಂಕ್ ವೊಂದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ದೆಹಲಿಯ ಸಿಟಿ ವಾಕ್ ಮಾಲ್ ನಲ್ಲಿ ಭೇಟಿಯಾಗೋಣವೆಂದು ಆಕೆಯನ್ನು ಕರೆಸಿಕೊಂಡಿದ್ದಾನೆ. ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೂರಿಸಿಕೊಂಡು, ಕುಡಿಯುವುದಕ್ಕೆ ತಂಪು ಪಾನೀಯ ನೀಡಿದ್ದಾನೆ. ಯಾವ ಅನುಮಾನವನ್ನೂ ವ್ಯಕ್ತಪಡಿಸಿದೆ ಹುಡುಗಿ ಆ ಪಾನೀಯವನ್ನು ಸೇವಿಸಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಆಕೆಗೆ ಪ್ರಜ್ಞೆ ತಪ್ಪಿದೆ.

Girl raped in City walk mall car parking at Delhi

ನಂತರ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ನಾಪತ್ತೆಯಾಗಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಮಾಲಿನ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸುತ್ತಿರುವ ಪೊಲೀಸರು ಆರೋಪಿಹಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುತ್ತಿದ್ದಂತೆಯೇ ತಗಮ್ಮ ಫೋನ್ ನಂಬರ್ ನೀಡೀ, ಭೇಟಿಯಾಗುವುದಕ್ಕೆ ಒಪ್ಪಿ, ಅವರು ನೀಡಿದ ಪಾನೀಯವನ್ನು ಕುಡಿದು, ಅಪರಿಚಿತರನ್ನು ಈ ಪರಿ ನಂಬುವ ಹುಡುಗಿಯರಿಗೆ ಏನೆನ್ನಬೇಕು ಎಂಬುದು ಸದ್ಯ ಯೋಚಿಸಬೇಕಾದ ಪ್ರಶ್ನೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+