ಪೆಟ್ರೋಲ್ ದರ ಏರಿಕೆ: ಟೀಕಾಕಾರರಿಗೆ ಅಮಿತ್ ಶಾ ಟಾಂಗ್
ನವದೆಹಲಿ, ಮೇ 26: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
"ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ಕಾಲದಲ್ಲಿ ಮೂರು ವರ್ಷಗಳ ಕಾಲ ಇದೇ ರೀತಿ ಏರಿಕೆ ಕಂಡಿತ್ತು. ಆಗ ಮೂರು ವರ್ಷವೂ ಯಾರೂ ಏನೂ ಮಾತನಾಡಲಿಲ್ಲ. ಆದರೆ ಈಗ ಮೂರು ದಿನ ಬೆಲೆ ಏರಿದರೆ ಇವರಿಗೆ(ಕಾಂಗ್ರೆಸ್) ತಡೆಯುವುದಕ್ಕಾಗುವುದಿಲ್ಲ" ಎಂದು ಟಾಂಗ್ ನೀಡಿದರು.
ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಚರ್ಚೆ ನಡೆಸಿದ್ದು, ಇಂಧನ ದರವನ್ನು ಕಡಿತಗೊಳಿಸಲು ದೀರ್ಘಕಾಲೀನ ಪರಿಹಾರವನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಅವರು ಹೇಳಿದರು.

ಕಳೆದ ಮೂರು ದಿನಗಳಿಂದ ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ, ಪ್ರತಿ ಲೀಟರ್ ಗೆ 84 ರೂ ಆಸುಪಾಸಿನಿಂದ ಕೆಳಗಿಳಿಯುತ್ತಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಗೆ 79 ರೂ.ಇದೆ.












Click it and Unblock the Notifications