ನನ್ನ ಸಾಮರ್ಥ್ಯ ತೋರಿಸಲ್ಲೊಂದು ಅವಕಾಶ ಕೊಡಿ: ಚೌಹಾಣ್

ನವದೆಹಲಿ, ಅಕ್ಟೋಬರ್, 14 : 'ಸತತ 35 ವರ್ಷಗಳಿಂದ ನಟನಾ ಹಾದಿಯಲ್ಲಿ ಸಾಗಿಬಂದ ನನಗೆ ನನ್ನ ಸಾಮರ್ಥ್ಯ ಪ್ರದರ್ಶಿಸಲು ಒಂದು ಅವಕಾಶ ಮಾಡಿಕೊಡಿ' ಎಂದು ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿಐಐ) ನಿರ್ದೇಶಕ ಗಜೇಂದ್ರ ಚೌಹಾಣ್ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಕ್ಕೆ ಬೇಡಿಕೊಂಡಿದ್ದಾರೆ.

ದೆಹಲಿಯ ರಾಮಲೀಲಾದಲ್ಲಿ ಅಕ್ಟೋಬರ್ 14ರ ಬುಧವಾರದಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ ಎಫ್ ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟದ್ದಾರೆ. ನಗರದಲ್ಲಿ ವಿದ್ಯಾರ್ಥಿಗಳು ಕೈಗೊಂಡಿರುವ ಹೋರಾಟ ತಾರಕಕ್ಕೆ ಏರಿರುವುದನ್ನು ಕಂಡು ಬೇಸರಗೊಂಡಿದ್ದಾರೆ.[ಅನಿರ್ದಿಷ್ಟಾವಧಿ ಉಪವಾಸ ಕೈಬಿಟ್ಟ ಎಫ್ ಟಿಐಐ ವಿದ್ಯಾರ್ಥಿಗಳು]

FTII director Gajendra Chauhan has asked opportunity to students and government will show his ability

'ನಾನು ಬರ್ಸಾತ್, ಅಂದಾಜ್, ಬಾಗಬನ್ ನಂತಹ ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದೇನೆ. 700ಕ್ಕೂ ಅಧಿಕ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನಗೂ ಉತ್ತಮ ಜವಾಬ್ದಾರಿಯನ್ನು ನಿರ್ವಹಿಸುವ ಇಚ್ಛೆ ಇದೆ. ಎಫ್ ಟಿಐಐ ಸಂಸ್ಥೆಯ ಹೆಸರಿಗೆ ಯಾವುದೇ ಕಳಂಕ ಬಾರದಂತೆ ನಾನು ಉತ್ತಮವಾಗಿ ಕಾರ್ಯನಿರ್ವಹಿಸಿ ತೋರಿಸುತ್ತೇನೆ' ಎಂದು ಚೌಹಾಣ್ ಕೇಳಿಕೊಂಡಿದ್ದಾರೆ.

ಸುಮಾರು ದಿನಗಳಿಂದ ಎಫ್ ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಸಂಸ್ಥೆಯ ವಿದ್ಯಾರ್ಥಿಗಳು ಹಲವಾರು ಬಾರಿ ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸರಿಯಾಗಿ ಸ್ಪಂದಿಸದ ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹಾಕಲು ಅನಿರ್ದಿಷ್ಟಾವಧಿ ಉಪವಾಸಕ್ಕೆ ಮುಂದಾಗಿ ಹಲವಾರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.[ಎಫ್ ಟಿಐಐ ಪ್ರತಿಭಟನೆ : ಐವರು ವಿದ್ಯಾರ್ಥಿಗಳು ಪೊಲೀಸರ ವಶ]

ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಗಂಭೀರವಾಗಿ ತೆಗೆದುಕೊಂಡ ಫಿಲ್ಮ್ ಡಿವಿಜನ್ ನ ಜಂಟಿ ಕಾರ್ಯದರ್ಶಿಯಾದ ಕೆ. ಸಂಜಯ್ ಮೂರ್ತಿಯೊಂದಿಗೆ ಮಾತುಕತೆಗೆ ಮುಂದಾಗಿ ಉಪವಾಸ ಕೈಬಿಡುವ ನಿರ್ಧಾರ ಪ್ರಕಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+