ಸುಪ್ರೀಂಕೋರ್ಟ್, ದೆಹಲಿ ಸಿಎಂ ಕೇಜ್ರಿವಾಲ್ ಕಿವಿಹಿಂಡಿದ್ದು ಈ ಕಾರಣಕ್ಕೆ!

ನವದೆಹಲಿ, ಸೆ 7: ಪ್ರತೀದಿನ ಸುದ್ದಿಯಲ್ಲಿ ಇರುತ್ತಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ಅಷ್ಟೇನೂ ಸುದ್ದಿಯಲ್ಲೇ ಇಲ್ಲ.

ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ದೆಹಲಿ ಅಸೆಂಬ್ಲಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಆಮ್ ಆದ್ಮಿ ಪಕ್ಷ, ಹಲವು ಆಫರ್ ಗಳನ್ನು ಮತದಾರರಿಗೆ ಈಗಿಂದಲೇ ನೀಡುತ್ತಿದೆ.

ಅದರಲ್ಲಿ ಒಂದು 'ಮಹಿಳೆಯರಿಗೆ ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಉಚಿತ ಪ್ರಯಾಣ'. ಕೇಜ್ರಿವಾಲ್ ನೀಡಿದ ಈ ಉಚಿತ ಆಫರ್ ಬಗ್ಗೆ ಸರ್ವೋಚ್ಚ ನ್ಯಾಯಾಲಯ, ದೆಹಲಿ ಸರಕಾರಕ್ಕೆ ಚಾಟಿ ಬೀಸಿದೆ.

Free Ridership For Women In Delhi Metro: Supre Court Dig At CM Arvind Kejriwal

" ನಿಮ್ಮ ಈ ಉಚಿತ ಆಫರ್, ದೆಹಲಿ ಮೆಟ್ರೋಗೆ ಭಾರೀ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವುದಿಲ್ಲವೇ" ಎಂದು ಪ್ರಶ್ನಿಸಿರುವ ಸುಪ್ರೀಂ, " ಸಾರ್ವಜನಿಕರ ಹಣವನ್ನು ಬಳಸುವಾಗ, ಜವಾಬ್ದಾರಿಯುತರಾಗಿರಬೇಕಲ್ಲವೇ" ಎಂದು ಸುಪ್ರೀಂಕೋರ್ಟ್, ಕೇಜ್ರಿವಾಲ್ ಕಿವಿಹಿಂಡಿದೆ.

ದೆಹಲಿ ಸರಕಾರದ ಈ ಉಹಿತ ಆಫರ್ ಅನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆಯ ವೇಳೆ, ಸುಪ್ರೀಂ, ಈ ಮೇಲಿನ ಕಳವಳವನ್ನು ವ್ಯಕ್ತಪಡಿಸಿದೆ.

ದೆಹಲಿ ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಭರ್ಜರಿ ಆಫರ್ ಅನ್ನು ಕೇಜ್ರಿವಾಲ್, ಕಳೆದ ಜೂನ್ ತಿಂಗಳಲ್ಲಿ ಪ್ರಕಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+