ನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತ

ನವದೆಹಲಿ, ನವೆಂಬರ್ 19: ಕೇಂದ್ರ ದೆಹಲಿಯ ಕರೋಲ್ ಬಾಗ್‌ ಸಮೀಪದ ಜನನಿಬಿಡ ಫ್ಯಾಕ್ಟರಿ ಒಂದರಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಸೋಮವಾರ ಮಧ್ಯಾಹ್ನ 12.23ರ ಸಮಯಕ್ಕೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿಯ ಜ್ವಾಲೆ ಕಾರ್ಖಾನೆಯನ್ನು ಆವರಿಸಿತ್ತು. ಬಟ್ಟೆಗಳನ್ನು ಒಗೆಯಲು ಬಳಸುವ ದ್ರಾವಕವೊಂದು ನೆಲದ ಮೇಲೆ ಚೆಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿತ್ತು ಎಂದು ಹೇಳಲಾಗಿದೆ.

ಘಟನೆಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಘಟನೆ ವೇಳೆ ಬಾಗಿಲಿನ ಸಮೀಪವೇ ಕುಳಿತಿದ್ದ ಸ್ಥೂಲಕಾಯದ ವ್ಯಕ್ತಿಯೊಬ್ಬರು ನಿರ್ಗಮನ ದ್ವಾರದ ಮೂಲಕ ತಪ್ಪಿಸಿಕೊಳ್ಳಲು ಹೋಗಿ ಅಲ್ಲಿ ಸಿಲುಕಿಕೊಂಡರು. ಇದರಿಂದ ಆ ಕಟ್ಟಡದಲ್ಲಿದ್ದ ಇತರರೂ ಹೊರ ಹೋಗುವಂತೆ ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

four dead in a fire accident central delhi factory

ಮೃತಪಟ್ಟವರನ್ನು ಬಾಗನ್ ಪ್ರಸಾದ್ (55), ಆರ್ಎಂ ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ.

25 ವರ್ಷದ ಅಜಿತ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+