ಬ್ರೇಕಿಂಗ್ ನ್ಯೂಸ್: ದೆಹಲಿ ಕೋರ್ಟಿನಲ್ಲಿ ಗುಂಡಿನ ದಾಳಿ, ಪೇದೆ ಸಾವು
ನವದೆಹಲಿ, ಡಿ. 23: ಇಲ್ಲಿನ ಕರ್ಕಾರ್ ದೂಮಾ ಕೋರ್ಟ್ ಆವರಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ದುಷ್ಕರ್ಮಿಗಳು ಬುಧವಾರ ಬೆಳಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಗುಂಡಿನ ಸುರಿಮಳೆಗೈದು ಪರಾರಿಯಾದ ಘಟನೆ ನಡೆದಿದೆ.
ಕರ್ಕಾರ್ ದೂಮಾ ಕೋರ್ಟ್ ಹಾಲ್ ಸಂಖ್ಯೆ 73ರಲ್ಲಿ ವಿಚಾರಣೆ ನಡೆಯುವ ವೇಳೆಗೆ ಕೋರ್ಟಿನೊಳಗೆ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು ಮನಬದಂತೆ ಗುಂಡು ಹಾರಿಸಿದರು.

ಒಟ್ಟು 10 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಓರ್ವ ಪೊಲೀಸ್ ಪೇದೆ ಹಾಗೂ ಮೂವರು ಕ್ಲರ್ಕ್ ಗಳಿಗೆ ಗಾಯವಾಗಿತ್ತು. ಗಾಯಗೊಂಡಿದ್ದ ಪೊಲೀಸ್ ಪೇದೆ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿರುವ ಆರು ಜಿಲ್ಲಾ ನ್ಯಾಯಾಲಯಗಳಲ್ಲಿ ಪೈಕಿ ಕರ್ಕಾರ್ ದೂಮಾ ಕೋರ್ಟ್ ಜಿಲ್ಲಾ ನ್ಯಾಯಾಲಯವೂ ಒಂದಾಗಿದೆ. ನ್ಯಾಯಾಧೀಶರ ಎದುರೇ ನಡೆದ ಈ ಕೃತ್ಯದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೂರ್ವ ದೆಹಲಿಯ ಫಾರ್ಶ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications