ದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: 6 ಮಂದಿ ಸಾವು, 11 ಮಂದಿಗೆ ಗಾಯ
ನವದೆಹಲಿ, ಆಗಸ್ಟ್ 6: ನವದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿ 6 ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ದೆಹಲಿಯ ಝಾಕಿರ್ ನಗರದಲ್ಲಿರುವ ಜಾಮಿಯಾ ಮಿಲಿಯಾ ಯೂನಿವರ್ಸಿಟಿ ಬಳಿ ಬೆಳಗಿನ ಜಾವ ಸುಮಾರು 2 ಗಂಟೆ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ಎಲೆಕ್ಟ್ರಿಸಿಟಿ ಬಾಕ್ಸ್‌ನಿಂದ ಬೆಂಕಿ ತಗುಲಿದ್ದು ಎಲ್ಲರೂ ನಿದ್ದೆಯಲ್ಲಿದ್ದ ಕಾರಣ ಅವಘಡದ ಬಗ್ಗೆ ಗೊತ್ತಾಗಲೇ ಇಲ್ಲ.

ಕೆಲವರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ್ದು ಅವರಿಗೆ ಗಂಭೀರ ಗಾಯಗಳಾಗಿವೆ.ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಕಾರು ಹಾಗೂ ಎಂಟು ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ.












Click it and Unblock the Notifications