ಆಸ್ಪತ್ರೆಯಲ್ಲಿ ಇದ್ದಾರಾ ಬಾಬಾ ರಾಮ್ ದೇವ್, ಏನಿದು ಸುದ್ದಿ?
ನವ ದೆಹಲಿ, ಮಾರ್ಚ್ 23: ಬಾಬಾ ರಾಮ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಹರಿಬಿಡುತ್ತಿದ್ದಾರೆ. ಆದರೆ, ಇದೊಂದು ಸುಳ್ಳು ಸುದ್ದಿಯಾಗಿದೆ.
Recommended Video
ಕೊರೊನಾ ವೈರಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಕ್ ನ್ಯೂಸ್ ಗಳು ಬರುತ್ತಿವೆ. ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಎಷ್ಟು ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಅದೇ ರೀತಿ ಬಾಬಾ ರಾಮ್ ದೇವ್ ಬಗ್ಗೆ ಹೀಗೊಂದು ಸುದ್ದಿ ಬಂದಿದೆ.
ಬಾಬಾ ರಾಮ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಫೋಟೋವನ್ನು ಕೂಡ ಸಾಕ್ಷಿಯಾಗಿ ನೀಡಿದ್ದಾರೆ. ಆದರೆ, ಈ ಫೋಟೋ 2011ರದ್ದಾಗಿದೆ. ಆಗ ಬಾಬಾ ರಾಮ್ ದೇವ್ ಬ್ಲಾಕ್ ಮನಿ ವಿರುದ್ಧ ಪ್ರತಿಭಟನೆ ಮಾಡಿದ್ದರು. 9 ದಿನಗಳ ಕಾಲ ಉಪವಾಸ ನಡೆಸಿದ್ದರು.

ಆಗ ಆಸ್ಪತ್ರೆಯಲ್ಲಿ ತೆಗೆದ ಚಿತ್ರವನ್ನು ಈಗ ಶೇರ್ ಮಾಡಿ ಬಾಬಾ ರಾಮ್ ದೇವ್ ಗೋ ಮೂತ್ರವನ್ನು ಹೆಚ್ಚು ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು AR ಎಂಬ ಟ್ವಿಟ್ಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.












Click it and Unblock the Notifications