Fake: ನೌಕರನಿಗೆ ಪಾಸಿಟಿವ್ ಬಂದ್ರೆ, ಮಾಲೀಕನಿಗೆ ಜೈಲು?
ನವ ದೆಹಲಿ, ಏಪ್ರಿಲ್ 23: ಲಾಕ್‌ಡೌನ್‌ನಿಂದ ಕೇಂದ್ರ ಸರ್ಕಾರ ಕೈಗಾರಿಕೆ ಉದ್ಯಮಗಳಿಗೆ ಕೊಂಚ ಸಲಿಡಿಕೆ ನೀಡಿದೆ. ಆದರೆ, ಇದರ ನಡುವೆಯೇ ಈ ಬಗ್ಗೆ ಒಂದು ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೈಗಾರಿಕಾ ಘಟಕದಲ್ಲಿ ಯಾವುದಾದರು ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದರೆ, ಆ ಕೈಗಾರಿಕಾ ಘಟಕದ ಮಾಲೀಕರನ್ನು ಗೃಹ ವ್ಯವಹಾರಗಳ ಸಚಿವಾಲಯ ಬಂಧನ ಮಾಡುತ್ತದೆ ಎನ್ನುವ ಸುಳ್ಳು ಸಂದೇಶ ಇದಾಗಿದೆ.
SOP ಒಬ್ಬರು ''ಸರ್ ದಯವಿಟ್ಟು ಕೆಲಸದ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಸೋಂಕಿಗೆ ಒಳಗಾಗಿದ್ದರೆ, ಯಾರು ಜವಾಬ್ದಾರರು ಎಂದು ಸಲಹೆ ನೀಡಿ'' ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಕಾರ್ಖಾನೆ ಮಾಲೀಕರು ಎಫ್‌ಐಆರ್ ದಾಖಲಿಸಲಾಗುವುದು ಎಂಬ ಉತ್ತರ ಬಂದಿತ್ತು.

ಆದರೆ, ಈ ಬಗ್ಗೆ ಇದೀಗ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದೆ. ಕೈಗಾರಿಕಾ ಘಟಕದಲ್ಲಿ ಯಾವುದಾದರು ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದರೆ, ಆ ಕೈಗಾರಿಕಾ ಘಟಕದ ಮಾಲೀಕರನ್ನು ಬಂಧನ ಮಾಡುವುದಿಲ್ಲ ಎಂದು ತಿಳಿಸಿದೆ.
ಏಪ್ರಿಲ್ 20ರ ನಂತರ ಪ್ರಾರಂಭವಾಗುತ್ತಿರುವ ಕೈಗಾರಿಕಾ ಘಟಕಗಳಿಗೆ ಗೃಹ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಯನ್ನು ನೀಡಿತ್ತು. ಅದರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು.
ಕೆಲಸದ ಸ್ಥಳಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಕಠಿಣ ಮಾರ್ಗ ಸೂಚಿಗಳನ್ನು ಅನುಸರಿಸಬೇಕು ಎಂದು ಎಂಎಚ್‌ಎ ತಿಳಿಸಿತ್ತು. ನೌಕರರ ಸಾಮಾಜಿಕ ಅಂತರ ಮತ್ತು ನೈರ್ಮಲ್ಯೀಕರಣ ಅತ್ಯಗತ್ಯ ಎಂದು ಈ ಆದೇಶ ಹೇಳುತ್ತದೆ.












Click it and Unblock the Notifications