ನಕಲಿ ಪದವಿ ವಿವಾದ : ದೆಹಲಿ ಸಚಿವ ತೋಮಾರ್ ಬಂಧನ
ನವದೆಹಲಿ, ಜೂ.9: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮುಜುಗರ ತರುವ ಪ್ರಸಂಗ ಮಂಗಳವಾರ ನಡೆದಿದೆ. ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮಾರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
|ನಕಲಿ ಪ್ರಮಾಣ ಪತ್ರ ಮೂಲಕ ಪದವಿ ಪಡೆದ ಆರೋಪ ಜಿತೇಂದ್ರ ಸಿಂಗ್ ತೋಮಾರ್ ಅವರ ಮೇಲಿದೆ. ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ತೋಮಾರ್, ನನ್ನ ಮನೆ ಮುಂದೆ 30 ರಿಂದ 40 ಜನ ಪೊಲೀಸರ ತಂಡ ಬಂದಿತ್ತು. ಪೊಲೀಸ್ ಬಳಿ ಬಂಧನ ವಾರೆಂಟ್ ಇರಲಿಲ್ಲ. ಅದರೂ, ಪ್ರಕರಣದ ವಿಚಾರಣೆಗೆ ಸಹಕರಿಸಲು ನಾನು ಅವರ ಜೊತೆ ತೆರಳಿದೆ. ರಾಜಕೀಯ ದ್ವೇಷದಿಂದ ನನ್ನ ಬಂಧನವಾಗಿದೆ ಎಂದಿದ್ದಾರೆ.

ತೋಮಾರ್ ಬಂಧಿಸಿಲ್ಲ: ನಕಲಿ ಪದವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ತೋಮಾರ್ ಅವರನ್ನು ಬಂಧಿಸಿಲ್ಲ. ಪೊಲೀಸರು ವಶಕ್ಕೆ ಪಡೆದು ವಸಂತ್ ವಿಹಾರ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಎಂದು ಪೊಲೀಸ್ ಆಯುಕ್ತ ಬಸ್ಸಿ ಹೇಳಿದ್ದಾರೆ.
ಆದರೆ, ಕಳೆದ ರಾತ್ರಿಯೇ ತೋಮಾರ್ ವಿರುದ್ಧ ಐಪಿಸಿ ಸೆಕ್ಷನ್ 420, 467 ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
48 ವರ್ಷ ವಯಸ್ಸಿನ ತೋಮಾರ್ ಅವರು ತ್ರಿನಗರ್ ಅಸೆಂಬ್ಲಿಯಿಂದ ಗೆದ್ದು ಶಾಸಕರಾಗಿ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಫೆಬ್ರವರಿ 2015ರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಹಾರದ ಟಿಲ್ಕಾ ಮಾಂಝಿ ಭಗಲ್ ಪುರ್ ವಿಶ್ವವಿದ್ಯಾಲಯದಿಂದ 1999ರಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದೇನೆ ಎಂದು ಚುನಾವಣೆ ಸಂದರ್ಭದಲ್ಲಿ ತೋಮಾರ್ ಅವರು ಅಫಿಡವಿಟ್ ಸಲ್ಲಿಸಿದ್ದಾರೆ.
ಅದರೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಈ ವಿಶ್ವವಿದ್ಯಾಲಯದ ಪದವಿಗೆ ಮಾನ್ಯತೆ ಸಿಕ್ಕಿಲ್ಲ. ಇದು ಫೇಕ್ ಪದವಿ ಎಂದು ಮಾಧ್ಯಮಗಳಲ್ಲಿ ವರದಿ ಬರತೊಡಗಿತು. 2013ರಲ್ಲಿ ಕಾಂಗ್ರೆಸ್ ನಲ್ಲಿದ್ದ ತೋಮಾರ್ ಅವರು ನಂತರ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು.
Delhi Law minister Jitendra Tomar taken to Hauz Khas Police station, questioning underway pic.twitter.com/EoPuFjsyFp
— ANI (@ANI_news) June 9, 2015 ಎಎಪಿ ಮುಖಂಡ ಸಂಜಯ್ ಸಿಂಗ್ ಪ್ರತಿಕ್ರಿಯೆ
His(Jitender Tomar) case is under Court's jurisdiction,university has also filed a reply in court stating his degrees are fine: Sanjay Singh
— ANI (@ANI_news) June 9, 2015 (ಒನ್ ಇಂಡಿಯಾ ಸುದ್ದಿ)












Click it and Unblock the Notifications