• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?

By ವಿಕಾಸ್ ನಂಜಪ್ಪ
|

ನವದೆಹಲಿ, ಮೇ 10 : ಲೋಕಸಭೆ ಚುನಾವಣೆಯಲ್ಲಿ ಕೊನೆ ಎರಡು ಹಂತದಲ್ಲಿ ತೀವ್ರವಾದ ವೈಯಕ್ತಿಕ ದಾಳಿ, ನಿಂದನೆಗಳು ಅಧಿಕವಾಗಿವೆ. ದೆಹಲಿ ಹಾಗೂ ಪಂಜಾಬ್ ನಲ್ಲಿ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಇತಿಹಾಸವನ್ನು ಕೆದಕಿ, ರಾಜೀವ್ ಗಾಂಧಿ ಅವರನ್ನು ಗುರಿಯನ್ನಾಗಿಸಿಕೊಂಡು ಪ್ರಖರ ಭಾಷಣ ಮಾಡಿದ್ದಂತೆ, ಇತಿಹಾಸ ಪುಟಗಳನ್ನು ಮತ್ತೊಮ್ಮೆ ತಿರುಗಿಸಿ ನೋಡುವ ಸಂದರ್ಭ ಒದಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಜೀವ್ ಗಾಂಧಿ ಅವರು 1984ರಲ್ಲಿ ಸಿಖ್ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು ಎಂಬ ಚರ್ಚೆ ಬಗ್ಗೆ ಗಮನ ಹರಿಸಬೇಕಿದೆ.

'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!

ಬಿಜೆಪಿ ವಾದ : ಜಸ್ಟೀಸ್ ನಾನಾವತಿ ಆಯೋಗದಿಂದ ಈ ಪ್ರಕರಣದ ತನಿಖೆ ನಡೆಸಲಾಗಿತ್ತು. ಅಂದಿನ ಸರ್ಕಾರವೇ ತನ್ನ ಜನರನ್ನು ಕೊಲ್ಲಲು ಆದೇಶ ನೀಡಿತ್ತು. ಸಿಖ್ಖರು ಹೆಚ್ಚಾಗಿದ್ದ ಪ್ರದೇಶವನ್ನು ನಾಶ ಪಡಿಸುವ ಆದೇಶವನ್ನು ಖುದ್ದು ಪ್ರಧಾನಿ ರಾಜೀವ್ ಗಾಂಧಿ ನೀಡಿದ್ದರು. ಅಂದು ಅವರು ಮಾಡಿದ ಕರ್ಮಕ್ಕೆ ತಕ್ಕ ಬೆಲೆ, ನ್ಯಾಯ ಸಿಗಬೇಕಿದೆ.

ನಾನಾವತಿ ಆಯೋಗ ವರದಿಯಲ್ಲೇನಿದೆ : ಜಸ್ಟೀಸ್ ನಾನಾವತಿ ಅಯೋಗವು ರಾಜೀವ್ ಗಾಂಧಿ ಅವರ ಪಾತ್ರದ ಬಗ್ಗೆ ಏನು ಹೇಳಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆಯೋಗದ ವರದಿಯಲ್ಲಿ ರಾಜೀವ್ ಗಾಂಧಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?

ಆಯೋಗದ ವರದಿಯ ಪುಟ 181 ಹಾಗೂ 182ರಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಅದರಲ್ಲಿ ಹೀಗೆ ಬರೆಯಲಾಗಿದೆ.

" it was suggested that Shri Rajiv Gandhi had told one of his officials that Sikhs should be taught a lesson. The Commission finds no substance in that allegation. The evidence in this behalf is very vague. It is not believable that Shri Rajiv Gandhi would have stated so to an official assuming that some conversation took place between him and that official."

English summary
The election battle moves to Delhi and Punjab in the final two phases of the Lok Sabha elections. Stepping up its attack, the BJP blamed former (late) prime Minister, Rajiv Gandhi for the Sikh massacre of 1984.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more