Breaking: ದೆಹಲಿ ಕೋರ್ಟ್‌ನಲ್ಲಿ ಸ್ಫೋಟ, ಒಬ್ಬರಿಗೆ ಗಾಯ
ನವದೆಹಲಿ, ಡಿಸೆಂಬರ್ 09: ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಒಬ್ಬರಿಗೆ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ.

ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದೆ, ನ್ಯಾಯಾಲಯದಲ್ಲಿರುವ ಲ್ಯಾಪ್‌ಟಾಪ್ ಸ್ಪೋಟಗೊಂಡಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ.
ಬೆಳಗ್ಗೆ 10.40ರ ಸಮಯದಲ್ಲಿ ಸ್ಫೋಟಗೊಂಡಿರುವ ಕುರಿತು ನಮಗೆ ಮಾಹಿತಿ ಬಂದಿತ್ತು ಎಂದು ಅಗ್ನಿಶಾಮಕದರಳದ ಸಿಬ್ಬಂದಿ ತಿಳಿಸಿದ್ದಾರೆ. ನ್ಯಾಯಾಲಯದ ವಿಚಾರಣೆಯನ್ನು ಮುಂದೂಡಲಾಗಿದೆ. ಓರ್ವ ವ್ಯಕ್ತಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರೆತಿದೆ.
102ನೇ ಕೋರ್ಟ್ ರೂಂನಲ್ಲಿ ಬ್ಯಾಂಗ್ ಒಂದರಲ್ಲಿ ಸ್ಫೋಟಕಗಳಿದ್ದವು, ವಿಡಿಯೋದಲ್ಲಿ ನೆಲದ ಮೇಲೆ ಬ್ಯಾಗ್ ಇರುವುದು ಪತ್ತೆಯಾಗಿದೆ. ಆರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಫಾರೆನ್ಸಿಕ್ ತಂಡವು ಸ್ಥಳಕ್ಕೆ ಆಗಮಿಸಿದೆ.












Click it and Unblock the Notifications