ಡಿಎಲ್, ವಾಹನ ಪರ್ಮಿಟ್ ಅವಧಿ ಮುಗಿದಿದ್ದರೆ ಆತಂಕ ಬೇಡ

ದೆಹಲಿ, ಮಾರ್ಚ್ 31: ದೇಶಾದ್ಯಂತ ಲಾಕ್‌ಡೌನ್‌ ಚಾಲ್ತಿಯಿರುವ ಕಾರಣ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಸ್ಥಗಿತವಾಗಿದೆ. ಸಂಚಾರ ಇಲಾಖೆಯೂ ಸಂಪೂರ್ಣ ಬಂದ್ ಆಗಿದ್ದು, ಡಿಎಲ್, ಎಲ್‌ಎಲ್‌ ಪ್ರಕ್ರಿಯೆ ಸದ್ಯಕ್ಕೆ ಮಾಡದಿರಲು ನಿರ್ಧರಿಸಿತ್ತು.

ಇದೀಗ, ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ವಾಹನ ಸವಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದೆ. ಫೆಬ್ರವರಿ 1 ರಂದು ಮತ್ತು ನಂತರ ಡಿಎಲ್, ವಾಹನ ಪರವಾನಗಿ ಅವಧಿ ಮುಗಿದಿದ್ದರೆ ಅಂತವರಿಗೆ ಜೂನ್ ತಿಂಗಳವರೆಗೂ ವಿನಾಯಿತಿ ನೀಡುವುದಾಗಿ ಸರ್ಕಾರ ಆದೇಶಿಸಿದೆ.

ಡಿಎಲ್, ಪರವಾನಗಿ, ನೊಂದಣಿ, ಮರು ನೊಂದಣಿ ಹೀಗೆ ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳ ಅವಧಿ ಮುಗಿದಿದ್ದರೂ ಆ ದಾಖಲೆಗಳನ್ನು ಜೂನ್ 31ರವರೆಗೂ ಮಾನ್ಯತೆ ನೀಡಿ ಎಂದು ಪ್ರತಿರಾಜ್ಯಗಳಿಗೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.

Expired DL And Vehicle Permit Validity Extended Till June 30

ಸದ್ಯ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಪ್ರಧಾನಿ ಮೋದಿ ಏಪ್ರಿಲ್ 15ರವರೆಗೂ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಹೇಳಿದ್ದಾರೆ.

ಹಾಗಾಗಿ, ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+