ದುಬಾರಿ ದಂಡ: ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆಯಲು ಕೇಂದ್ರ ನಿರ್ಧಾರ

Recommended Video

      ಟ್ರಾಫಿಕ್ ದುಬಾರಿ ದಂಡದ ಬಗ್ಗೆ ಡಿ ಸಿ ಎಂ ಗೋವಿಂದ ಕಾರಜೋಳ ಹೇಳೋದೇನು ? | Oneindia Kannada

      ನವದೆಹಲಿ, ಸೆಪ್ಟೆಂಬರ್ 13: ಸಾರಿಗೆ ನಿಯಮ ಉಲ್ಲಂಘನೆ ದುಬಾರಿ ದಂಡ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

      ಸಾರಿಗೆ ನಿಯಮ ಉಲ್ಲಂಘನೆಗೆ ವಿಧಿಸಿದ್ದ ದಂಡ ಮೊತ್ತವನ್ನು ಕೆಲವು ರಾಜ್ಯಗಳು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಲ್ಲಾ ಸಿಎಂಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಿದ್ದಾರೆ.

      ಈಗಾಗಲೇ ಗಡ್ಕರಿಯವರು ಕಾನೂನು ಸಲಹೆ ಪಡೆದಿದ್ದಾರೆ. ನೂತನ ಮೋಟಾರು ವಾಹನ ಕಾಯ್ದೆಯಡಿಯಲ್ಲಿನ ದಂಡದ ಮೊತ್ತ ಕಡ್ಡಾಯವಲ್ಲ. ಅದರ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಮುಕ್ತ ಅವಕಾಶವಿದೆ. ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಈ ಹಿಂದೆ ತಿಳಿಸಿದ್ದರು.

      Expensive Penalties Gadkari Decision To Call CM Meeting Of All States

      ಅಷ್ಟೇ ಅಲ್ಲದೆ ನಿಮಗೆ ನಿಮ್ಮ ಜೀವಕ್ಕಿಂತಲೂ ದಂಡದ ಮೊತ್ತವೇ ಹೆಚ್ಚಾಯಿತೇ ಎಂದು ದೇಶದ ಜನತೆಯನ್ನು ಪ್ರಶ್ನಿಸಿದ್ದರು. ಮೊದಲಿಗೆ ಮೋಟಾರ್ ವಾಹನ ಕಾಯ್ದೆಯು ನಮ್ಮ ಸಹವರ್ತಿ ಪಟ್ಟಿಯಲ್ಲಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾನೂನು ರಚಿಸಲು ಅಧಿಕಾರ ಹೊಂದಿವೆ. ಉಲ್ಲಂಘನೆಗೆ ತಕ್ಕಂತೆ ದಂಡ ಬದಲಾಗುತ್ತದೆ. ರಾಜ್ಯಗಳಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ ಎಂದು ಹೇಳಿದ್ದರು.

      ಈ ಅಪಘಾತಗಳಿಗೆ ಹಲವು ಕಾರಣಗಳಿರುತ್ತವೆ. ರಸ್ತೆ ಎಂಜಿನಿಯರಿಂಗ್, ರಸ್ತೆ ಅಪಘಾತಗಳು ಮತ್ತು ಆಟೋಮೊಬೈಲ್‌ಗೆ ಸಂಬಂಧಿಸಿದವು. ಆದರೆ ಮುಖ್ಯ ಸಮಸ್ಯೆಯೇನೆಂದರೆ ನಿಯಮ ಉಲ್ಲಂಘಿಸುವವರು ಕಾನೂನುಗಳನ್ನು ಗೌರವಿಸುವುದಿಲ್ಲ ಮತ್ತು ಅವರಿಗೆ ಅದರ ಬಗ್ಗೆ ಹೆದರಿಕೆಯೇ ಇರುವುದಿಲ್ಲ. ದಂಡ ಹೆಚ್ಚಳದ ಮುಖ್ಯ ಉದ್ದೇಶವೇ ಅಪಘಾತಗಳ ಸಂಖ್ಯೆ ಇಳಿಸುವುದು ಮತ್ತು ಜೀವಗಳನ್ನು ಉಳಿಸುವುದಾಗಿದೆ' ಎಂದು ಅವರು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+