• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂದಿನ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಸಕಾರಾತ್ಮಕ ಹಾದಿಗೆ ಮರಳುವ ನಿರೀಕ್ಷೆಯಿದೆ: ಅಮಿತ್ ಶಾ

|

ನವದೆಹಲಿ, ನವೆಂಬರ್ 30: ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ತ್ರೈಮಾಸಿಕದಲ್ಲಿ ಕುಸಿತ ಕಂಡ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮುಂದಿನ ತ್ರೈಮಾಸಿಕದಲ್ಲಿ ಸಕಾರಾತ್ಮಕವಾದ ಹಾದಿಗೆ ಮರಳುವ ನಿರೀಕ್ಷೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಚೇತರಿಕೆಗಾಗಿ ಸಾಕಷ್ಟು ಶ್ರಮಿಸಿದ್ದು, ಕೊರೊನಾವೈರಸ್ ಬಿಕ್ಕಟ್ಟಿನ ನಂತರ ಬೃಹತ್ ಆರ್ಥಿಕ ಪ್ಯಾಕೇಜ್ ಅನ್ನು ಸಹ ಘೋಷಿಸಿದ್ದರು ಎಂದು ಅಹಮದಾಬಾದ್‌ನಲ್ಲಿ ಎರಡು ರಸ್ತೆಗಳನ್ನು ವರ್ಚುವಲ್ ಮೋಡ್ ಮೂಲಕ ಉದ್ಘಾಟಿಸಿದ ನಂತರ ಹೇಳಿದರು.

ಮೋದಿ ನಾಯಕತ್ವದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ದೇಶದಲ್ಲಿ ಆರ್ಥಿಕತೆಯ ಹಿಂಜರಿತ: ರಾಹುಲ್ ಗಾಂಧಿ ಕಿಡಿ

''ಪ್ರಧಾನಮಂತ್ರಿ ನರೇಂದ್ರಭಾಯ್ ಅವರು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭವಿಷ್ಯದ ದೃಷ್ಟಿಯಿಂದ ಆರ್ಥಿಕತೆಯ ಮೇಲಿನ ಅದರ ದೀರ್ಘಕಾಲೀನ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ನೀತಿ ನಿರೂಪಣೆಯನ್ನು ರೂಪಿಸಿದರು'' ಎಂದು ಅಮಿತ್ ಶಾ ಹೇಳಿದ್ದಾರೆ.

ಒಂದು ಸೆಕೆಂಡ್ ವ್ಯರ್ಥ ಮಾಡದೆ, ಕೃಷಿ ಕ್ಷೇತ್ರ, ವಿದ್ಯುತ್, ಕೈಗಾರಿಕಾ ನೀತಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು, ಅಭಿವೃದ್ಧಿಯ ವೇಗವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ರೂಪಿಸಿದರು ಎಂದಿದ್ದಾರೆ.

   ನಿಮ್ ಸಹವಾಸ ಸಾಕು ! Chinaಗೆ ಬಾರಿ Loss | Oneindia Kannada

   ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 7.5ಕ್ಕಿಂತ ಕಡಿಮೆಯಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ಬಿಡುಗಡೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಕೊರೊನಾವೈರಸ್‌ ಪ್ರೇರಿತ ಲಾಕ್‌ಡೌನ್‌ದಿಂದಾಗಿ ದಾಖಲೆಯ ಶೇಕಡಾ 23.9ರಷ್ಟು ಕುಸಿತ ಕಂಡಿದೆ.

   English summary
   Union Home Minister Amit Shah on Monday said he hopes the GDP will be back to positive territory in the next quarter, after two consecutive quarters of contraction.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X