ಸಿಬ್ಬಂದಿಗೆ ಕೊರೊನಾ ಸೋಂಕು; ನೀತಿ ಭವನ ಸೀಲ್ ಡೌನ್

ನವದೆಹಲಿ, ಏಪ್ರಿಲ್ 28 : ದೆಹಲಿಯಲ್ಲಿರುವ ನೀತಿ ಆಯೋಗದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಮಾಹಿತಿ ಬಂದ ಬಳಿಕ ನೀತಿ ಭವನವನ್ನು ಸೀಲ್ ಡೌನ್ ಮಾಡಲಾಗಿದೆ.

Recommended Video

      ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ ಸಿಎಂ ಕುಮಾರಸ್ವಾಮಿ | Oneindia Kannada

      ನೀತಿ ಭವನದ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ ಎಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಘೋಷಣೆ ಮಾಡಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ.

      ಕಳೆದ ವಾರ ಸಂಸತ್ ಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿತ್ತು. ಸಂಸತ್ ಭವನದಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇದುವರೆಗೂ ಒಬ್ಬರು ಸಿಬ್ಭಂದಿಗೆ ಮಾತ್ರ ಸೋಂಕು ತಗುಲಿದೆ.

      Employee Tests Positive For Covid 19 Niti Bhavan Sealed

      ಮಾರ್ಚ್ 23ರಂದು ಬಜೆಟ್ ಅಧಿವೇಶನ ಮುಂದೂಡಿದ ಬಳಿಕ ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ. ಮನೆಯಲ್ಲಿಯೇ ಇದ್ದ ಆತನಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಏಪ್ರಿಲ್ 18ರಂದು ಆತ ಪರೀಕ್ಷೆಗೆ ತೆರಳಿದ್ದ.

      ಏಪ್ರಿಲ್ 20ರಂದು ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ರಾಷ್ಟ್ರಪತಿ ಭವನದಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಮಹಿಳೆಯೊಬ್ಬರಿಗೂ ಸೋಂಕು ತಗುಲಿತ್ತು. ಇದರಿಂದಾಗಿ 25 ಕುಟುಂಬಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+