ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೆಹಲಿ ಮೇಲೆ ತುರ್ತು ಪರಿಸ್ಥಿತಿ ಹೇರಿದ ನರೇಂದ್ರ ಮೋದಿ'

By Madhusoodhan
|
Google Oneindia Kannada News

ನವದೆಹಲಿ ಜೂನ್, 25: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯೊಂದರ ವೇಳೆಯೇ ಆಮ್ ಆದ್ಮಿ ಪಕ್ಷದ ಶಾಸಕನನ್ನು ಪೊಲೀಸರು ಬಂಧಿಸಿದ ನಂತರ ಕೇಜ್ರಿವಾಲ್ ಇಂಥದ್ದೊಂಡು ಟ್ವೀಟ್ ಮಾಡಿದ್ದಾರೆ. "ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಂತೆ ಕಾಣುತ್ತಿದೆ. ದೆಹಲಿಯನ್ನು ಬಂಧನ, ದಾಳಿ, ಭಯೋತ್ಪಾದನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.['ನಿಜವಾದ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ ಕಾಲ']

new delhi

ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮೋದಿಯವರಿಗೆ ಹವ್ಯಾಸವಾಗಿದೆ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಮುಂದೆಯೇ ಎಂಎಲ್ ಎ ದಿನೇಶ್ ಮೊಹಾನಿಯಾ ಅವರನ್ನು ಬಂಧಿಸಿ ಕರೆದೊಯ್ಯಲಾಗಿದೆ. ದೇಶಕ್ಕೆ ಮೋದಿ ಏನನ್ನು ಹೇಳಲು ಹೊರಟಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.[ತುರ್ತು ಪರಿಸ್ಥಿತಿ ಬಂದಾಗ 112 ಸಂಖ್ಯೆಗೆ ಕರೆ ಮಾಡಿ]

ದೆಹಲಿಯ ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಅಡಿ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಶಾಸಕ ಮೊಹಾನಿಯಾ ಅವರನ್ನು ಶನಿವಾರ ಪತ್ರಿಕಾ ಗೋಷ್ಠಿಯ ವೇಳೆಯೇ ಪೊಲೀಸರು ಬಂಧಿಸಿದ್ದರು.

new delhi

ನೀರಿನ ಸಮಸ್ಯೆ ಬಗ್ಗೆ ಕೇಳಿದ್ದಕ್ಕೆ ಶಾಸಕ ಮೊಹಾನಿಯಾ ನನ್ನ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ತುಘಲಖಾಬಾದ್ ನಿವಾಸಿ 60 ವರ್ಷದ ರಾಕೇಶ್ ಕುಮಾರ್ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತನೆ ತೋರಿದ್ದ ಆರೋಪದ ಎದುರಿಸಿದ್ದ ಮೊಹಾನಿಯಾ ಟೀಕೆಗೆ ಗುರಿಯಾಗಿದ್ದರು.

English summary
Delhi Chief Minister Arvind Kejriwal on Saturday directly took on Prime Minister Narendra Modi, saying he has declared an "emergency like situation" in the national capital after the Delhi Police detained an AAP MLA. "Modi declares emergency in Delhi. Arresting, raiding, terrorizing, filing false cases against all those whom Delhi elected," Kejriwal tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X