ಡಿ.ಕೆ.ಶಿವಕುಮಾರ್‌ ಗೆ ಇಡಿ ಸಮನ್ಸ್‌: ಹೊಸ ಸಾಕ್ಷ್ಯ ಪತ್ತೆ?

Recommended Video

      ಡಿಕೆಶಿ ಗೆ ಸಮನ್ಸ್ ಜಾರಿ ಮಾಡಿದ ಇಡಿ | Oneindia Kannada

      ನವದೆಹಲಿ, ಜನವರಿ 06: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಮತ್ತೆ ಇಡಿ ಕಂಟಕ ಶುರುವಾಗಿದೆ. ಶಿವಕುಮಾರ್ ಗೆ ಇಡಿ ಸಮನ್ಸ್ ಜಾರಿ ಮಾಡಿದೆ.

      ಜನವರಿ 13 ರಂದು ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದ್ದು, 2013-14 ರ ಆರ್ಥಿಕ ವ್ಯವಹಾರದ ಮಾಹಿತಿಯನ್ನು ತರುವಂತೆ ಇಡಿ ಸೂಚಿಸಿದೆ.

      ತಮ್ಮ ಮೇಲೆ ಐಟಿ ಹೂಡಿರುವ ಪ್ರಕರಣಗಳ್ನು ರದ್ದು ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೆ ಹೈಕೋರ್ಟ್ ಮೆಟ್ಟಿಲೇರಿದ್ದರು, ಇದಾದ ಕೆಲವೇ ದಿನಗಳಲ್ಲಿ ಈಗ ಇಡಿ ಸಮನ್ಸ್‌ ನೀಡಿದೆ.

      ED Gave Summons To DK Shivakumar In Illeagel Money Transfer Case

      ಕಳೆದ ವರ್ಷ ಸೆಪ್ಟೆಂಬರ್ 03 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು, ಐವತ್ತು ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅಕ್ಟೋಬರ್ 23 ರಂದು ಜಾಮೀನು ದೊರೆತಿತ್ತು. ಪ್ರಸ್ತುತ ಅವರು ಜಾಮೀನಿನ ಮೇಲಿದ್ದಾರೆ.

      ಈಗ ಅದೇ ಇಡಿ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್‌ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಇಡಿಯು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಚುರುಕಾಗಿ ನಡೆಸುತ್ತಿತ್ತು, ಈಗ ಹೊಸ ಸಾಕ್ಷ್ಯ ದೊರಕಿರುವ ಕಾರಣ ಸಮನ್ಸ್‌ ನೀಡಲಾಗಿದೆ ಎನ್ನಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+