ಕನ್ನಡದಲ್ಲಿ ದೊರೆಯಲಿದೆ ನೋಟಾ ಬಟನ್
ನವದೆಹಲಿ, ಅ.13 : ವಿದ್ಯುನ್ಮಾನ ಮತ ಯಂತ್ರಗಳಲ್ಲಿ 'ಮೇಲಿನವರಲ್ಲಿ ಯಾರಿಗೂ ಮತ ಹಾಕುವುದಿಲ್ಲ' ಎಂಬ ಆಯ್ಕೆಯನ್ನು ಕನ್ನಡವೂ ಸೇರಿದಂತೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲೇ ಮತದಾರರಿಗೆ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ.
ಕೇಂದ್ರ ಚುನಾವಣಾ ಆಯೋಗದ ಆದೇಶ ಎಲ್ಲಾ ರಾಜ್ಯಗಳಿಗೆ ತಲುಪಿದ್ದು, ಇದರಿಂದಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಮತದಾರರು non of above ಮತವನ್ನು ಚಲಾಯಿಸಬಹುದಾಗಿದೆ.

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ಸಂಭಾವ್ಯ ಉಪಚುನಾವಣೆಗಳು ಸೇರಿದಂತೆ 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ಲಭಿಸಲಿದೆ. (ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ)
non of above ಎಂಬ ಆಯ್ಕೆಯನ್ನು ಇಂಗ್ಲಿಷ್ ಭಾಷೆಯ ಬದಲು ಆಯಾ ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಚುನಾವಣಾ ಆಯೋಗ ಆದೇಶಿಸಿದೆ. ಆದ್ದರಿಂದ ಕನ್ನಡದಲ್ಲೂ ಮೇಲಿನವರಲ್ಲಿ ಯಾರಿಗೂ ಮತ ಹಾಕುವುದಿಲ್ಲ ಎಂಬ ಆಯ್ಕೆ ದೊರೆಯಲಿದೆ.
ದೇಶದ ಈಶಾನ್ಯ ರಾಜ್ಯಗಳಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ, ಅಲ್ಲಿ ಬೇಕಾದರೆ ಇಂಗ್ಲಿಷ್‌ನಲ್ಲಿ ಆಯ್ಕೆ ನೀಡಬಹುದು. ಉಳಿದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಇದನ್ನು ಮುದ್ರಿಸಬೇಕು ಎಂದು ಚುನಾವಣಾ ಆಯೋಗ ಅ.11ರಂದು ಆದೇಶ ಹೊರಡಿಸಿದೆ. (ಮತದಾರರೇ, ಅಭ್ಯರ್ಥಿ ತಿರಸ್ಕರಿಸುವ ಹಕ್ಕು ಸಿಕ್ತು)
ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಮತದಾರರಿಗೆ ನೀಡುವ ಸಂಬಂಧ ಸೆ.27ರಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಈ ಆಯ್ಕೆ ಆಳವಡಿಸುವ ಸಂಬಂಧ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.












Click it and Unblock the Notifications