ಮಹಿಳೆಯರಿಗೆ ಉಚಿತ ಪ್ರಯಾಣ ವಿರೋಧಿಸಿ ಮೋದಿಗೆ 'ಮೆಟ್ರೋ ಮ್ಯಾನ್' ಪತ್ರ
ನವದೆಹಲಿ, ಜೂನ್ 14: ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಆಮ್ ಆದ್ಮಿ ಸರ್ಕಾರದ ಪ್ರಸ್ತಾವಕ್ಕೆ 'ಮೆಟ್ರೋ ಮ್ಯಾನ್' ಎಂದೇ ಖ್ಯಾತರಾದ ದೆಹಲಿ ಮೆಟ್ರೋದ ಮಾಜಿ ಮುಖ್ಯಸ್ಥ, ಎಂಜಿನಿಯರ್ ಇ. ಶ್ರೀಧರನ್ ವಿರೋಧ ವ್ಯಕ್ತಪಡಿಸಿದ್ದಾರೆ.
ದೆಹಲಿ ಸರ್ಕಾರದ ಈ ಉಚಿತ ಪ್ರಯಾಣದ ಯೋಜನೆಗೆ ಒಪ್ಪಿಗೆ ನೀಡದಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಮೆಟ್ರೋ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ದೆಹಲಿ ಸರ್ಕಾರ ಈಗಾಗಲೇ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್‌ಸಿ) ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾನ ಪಾಲುದಾರಿಗೆ ಹೊಂದಿದೆ.

ಡಿಎಂಆರ್‌ಸಿಯ ಪ್ರಧಾನ ಸಲಹೆಗಾರರಾಗಿರುವ ಶ್ರೀಧರನ್ ಅವರು, ಈ ವಿಚಾರದಲ್ಲಿ ಮೋದಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶ ಮಾಡುವಂತೆ ಕೋರಿದ್ದಾರೆ.
ಪಾಲುದಾರಿಕೆ ಹೊಂದಿರುವಾಗ ಒಬ್ಬ ಪಾಲುದಾರರು ಒಂದು ಸಮುದಾಯದ ಜನರಿಗೆ ರಿಯಾಯಿತಿ ನೀಡುವ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಇದು ದೆಹಲಿ ಮೆಟ್ರೋವನ್ನು ಅದಕ್ಷತೆ ಹಾಗೂ ದಿವಾಳಿತನಕ್ಕೆ ದೂಡಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications