ಗರ್ಭಿಣಿ ಸೊಸೆ ಸೂಸೈಡ್: ಮಾಜಿ ಕಾಂಗ್ರೆಸ್ ಶಾಸಕ ಅರೆಸ್ಟ್

Dowry death - New Delhi ex Congress MLA Shadi Ram family arrest
ನವದೆಹಲಿ, ನ.4: ಗರ್ಭಿಣಿ ಸೊಸೆಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕ ಸೇರಿದಂತೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

27 ವರ್ಷದ ರೇಖಾ ಎಂಬ ಮಹಿಳೆ ದೆಹಲಿಯ ಸರಾಯಿ ರೊಹಿಲ್ಲಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆ ಕಿರುಕುಳಾರ್ಥ ತಮ್ಮ ಮಗಳನ್ನು ಆಕೆಯ ಗಂಡನ ಮನೆಯವರು ಸಾಯಿಸಿದ್ದಾರೆ ಎಂದು ರೇಖಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ದೆಹಲಿಯ ಕಮಲಾನಗರದ ನಿವಾಸಿ, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಶಾದಿ ರಾಮ್, ಆತನ ಪತ್ನಿ ಧರ್ಮವತಿ, ರೇಖಾ ಪತಿ ಸುಧಾಂಶು (30) ಮತ್ತು ನಾದಿನಿ ಮನೀಶಾರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೇಖಾ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯಳಾಗಿದ್ದ ತಮ್ಮ ಮಗಳನ್ನು ಅಳಿಯ ಸುಧಾಂಶು ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರು ಎಂದು ರೇಖಾರ ಅಪ್ಪ ಅಶೋಕ್ ಚೌಧರಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ 2 ವರ್ಷಗಳ ಹಿಂದೆ ಸುಧಾಂಶು-ರೇಖಾ ಮದುವೆ ನಡೆದಿತ್ತು.

ಭಾರತೀಯ ದಂಡ ಸಂಹಿತೆಯಡಿ ವರದಕ್ಷಿಣೆ ಸಾವು, ವರದಕ್ಷಿಣೆ ಕಿರುಕುಳ ಆರೋಪದಡಿ 2 ಮಹಿಳೆಯರೂ ಸೇರಿದಂತೆ ನಾಲ್ವರನ್ನೂ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಕೇಶವಾಪುರ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+