• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಟುಕರನ್ನು ಗಲ್ಲಿಗೇರಿಸುವ ಹ್ಯಾಂಗ್‌ಮ್ಯಾನ್‌ಗಳ ಸಂಬಳ ಎಷ್ಟಿರುತ್ತೆ ಗೊತ್ತೆ?

|

ನವದೆಹಲಿ, ಡಿಸೆಂಬರ್‌ 14: ನಿರ್ಭಯಾ ಅತ್ಯಾಚಾರಿಗಳು ಸೇರಿ ದೇಶದಲ್ಲಿನ ಕಟುಕರನ್ನು ಗಲ್ಲಿಗೇರಿಸಲು ಒಬ್ಬ ನಿರ್ಧಿಷ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತನೂ ಒಬ್ಬ ಸರ್ಕಾರಿ ನೌಕರನಾಗಿದ್ದು, ಸಂಬಳ ಕೇಳಿದರೆ ಮಾತ್ರ ನೀವು ಬೆಚ್ಚಿಬೀಳುತ್ತೀರಿ..

ಕಟುಕರನ್ನು ಗಲ್ಲಿಗೇರಿಸುವವರಿಗೆ ಕೇವಲ ಮಾಸಿಕ 5 ಸಾವಿರ ರೂ. ನೀಡಲಾಗುತ್ತಿದೆ. ಈ ಹಿಂದೆ 3 ಸಾವಿರ ರೂ. ನೀಡುತ್ತಿದ್ದುದನ್ನು ಕಳೆದ ವರ್ಷ ಹೋರಾಟದ ಬಳಿಕ ಐದು ಸಾವಿರ ರೂ.ಗೆ ಏರಿಸಲಾಗಿದೆ.

ಹೈದರಾಬಾದಿನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಆರೋಪಿಗಳ ಹತ್ಯೆ ಬಳಿಕ ನಿರ್ಭಯಾ ಹಂತಕರನ್ನೂ ಗಲ್ಲಿಗೇರಿಸುವಂತೆ ಒತ್ತಡ ಕೇಳಿಬಂದಿತ್ತು.

ಬೇರೆಡೆ ಕೆಲಸವೂ ಸಿಗುವುದಿಲ್ಲ

ಬೇರೆಡೆ ಕೆಲಸವೂ ಸಿಗುವುದಿಲ್ಲ

ಸಾಮಾನ್ಯವಾಗಿ ಗಲ್ಲಿಗೇರಿಸುವವರು ಒಂದೇ ಕುಟುಂಬದ ಸದಸ್ಯರಾಗಿರುತ್ತಾರೆ.ಈಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಮುಂದಾಗಿರುವ ಹ್ಯಾಂಗ್‌ಮ್ಯಾನ್ ಮೂರನೇ ತಲೆಮಾರಿನವರಾಗಿದ್ದಾರೆ.

ತಂದೆ, ಅಜ್ಜನದು ಕೂಡ ಇದೇ ಕಸುಬು

ತಂದೆ, ಅಜ್ಜನದು ಕೂಡ ಇದೇ ಕಸುಬು

ಇವರ ತಂದೆ ಹಾಗೂ ಅಜ್ಜ ಕೂಡ ಇದೇ ಕಸುಬು ಮಾಡುತ್ತಿದ್ದರು. ಇವರ ಉದ್ಯೋಗದ ಹಿನ್ನೆಲೆ ಹೊರ ಜಗತ್ತಿಗೆ ಗೊತ್ತಾಗುತ್ತಿದ್ದಂತೆ ಯಾವುದೇ ಪಾರ್ಟ್‌ ಟೈಂ ಕೆಲಸ ಕೂಡ ಸಿಗುವುದಿಲ್ಲ. ಹೀಗಾಗಿ ಈ ದುಬಾರಿ ಜಗತ್ತಿನಲ್ಲಿ ಐದು ಸಾವಿರ ರೂ. ಸಂಬಳದಲ್ಲೇ ಕುಟುಂಬವನ್ನು ಮುನ್ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಕಟುಕರನ್ನು ಗಲ್ಲಿಗೇರಿಸಿ ದೇಶದಲ್ಲಿ ಲಕ್ಷಾಂತರ ಜನರಲ್ಲಿ ನಿರಾಳ ಭಾವ ಮೂಡಿಸುವಲ್ಲಿ ನೆರವಾಗುವ ಈ ಹ್ಯಾಂಗ್‌ಮ್ಯಾನ್‌ಗಳ ಜೀವವನ್ನು ಹಸನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಕೂಡ ನಡೆಯಬೇಕಿದೆ.

ಇಂದಿರಾಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದರು

ಇಂದಿರಾಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದರು

ಈಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ಧರಾಗಿರುವ ಮೀರತ್‌ ಜೈಲಿನ ಹ್ಯಾಂಗ್‌ಮೆನ್ ಕುಟುಂಬಕ್ಕೆ ಭಾರಿ ಹಿನ್ನೆಲೆಯಿದೆ.

ಇವರ ಅಜ್ಜ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದರು.ಇಂದಿರಾಗಾಂಧಿ ಹಂತಕರಿಬ್ಬರನ್ನು ಗಲ್ಲಿಗೇರಿಸುವಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಮೀರತ್ ಹಾಗೂ ಲಕ್ನೋ ಜೈಲಿನ ಹ್ಯಾಂಗ್‌ಮ್ಯಾನ್‌ಗಳಿಗೆ ಮನವಿ

ಮೀರತ್ ಹಾಗೂ ಲಕ್ನೋ ಜೈಲಿನ ಹ್ಯಾಂಗ್‌ಮ್ಯಾನ್‌ಗಳಿಗೆ ಮನವಿ

ತಿಹಾರ್ ಜೈಲಿನ ಮೂಲಗಳ ಪ್ರಕಾರ ಮೀರತ್ ಹಾಗೂ ಲಕ್ನೋ ಜೈಲಿನ ಹ್ಯಾಂಗ್‌ಮೆನ್‌ಗಳನ್ನು ನಿರ್ಭಯಾ ಅತ್ಯಾಚಾರಿಗಳ ಗಲ್ಲು ಪ್ರಕ್ರಿಯೆಗೆ ಮನವಿ ಮಾಡಲಾಗಿತ್ತು. ಆದರೆ ಲಕ್ನೋ ಜೈಲಿನ ಹ್ಯಾಂಗ್‌ಮೆನ್ ಆರೋಗ್ಯ ಸರಿ ಇರದ ಹಿನ್ನೆಲೆಯಲ್ಲಿ ಮೀರತ್ ಜೈಲಿನ ಹ್ಯಾಂಗ್‌ಮೆನ್‌ಗೆ ಸಿದ್ಧವಿರುವಂತೆ ಸೂಚಿಸಲಾಗಿದೆ.

English summary
Every one knows the execution process of death sentence but people not aware plot of the Hangman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X