ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ವಕ್ತಾರರಾಗಿ ದಿನೇಶ್, ಖುಷ್ಬೂ ನೇಮಕ

By Mahesh
|
Google Oneindia Kannada News

ನವದೆಹಲಿ, ಮಾ.26:ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೈಗೆ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ನೀಡಲು ಏಪ್ರಿಲ್ ತಿಂಗಳಲ್ಲಿ ಸಿಗಲಿದೆ ಎಂಬ ಸುದ್ದಿಯಿದೆ. ಇದಕ್ಕೂ ಮೊದಲು ಸುಮಾರು 17ಕ್ಕೂ ಅಧಿಕ ವಕ್ತಾರರು ಸೇರಿದಂತೆ ಕಾಂಗ್ರೆಸ್ ನ ಪದಾಧಿಕಾರಿಗಳ ಸ್ಥಾನ ಪಲ್ಲಟವಾಗಿದೆ. ಪ್ರಮುಖವಾಗಿ ಕರ್ನಾಟಕದ ಸಚಿವ ದಿನೇಶ್ ಗುಂಡೂರಾವ್, ತಮಿಳುನಾಡಿನ ನಟಿ ಖುಷ್ಬೂ ಅವರು ವಕ್ತಾರರ ಸ್ಥಾನಕ್ಕೇರಿರುವುದು ಹಲವರ ಹುಬ್ಬೇರಿಸಿದೆ.

ಕಾಂಗ್ರೆಸ್ ತನ್ನ ವಕ್ತಾರ ಪಟ್ಟಿಯನ್ನು ಪುನರ್ ರಚಿಸಿದೆ. ಅಜಯ್ ಮಾಕೇನ್, ಸಿಪಿ ಜೋಶಿ ಹಾಗೂ ಸತ್ಯವ್ರತ್ ಚತುರ್ವೇದಿ ಅವರು ಮುಖ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಆನಂದ್‌ ಶರ್ಮಾ, ಗುಲಾಂ ನಬಿ ಆಜಾದ್‌, ಮುಕುಲ್‌ ವಾಸ್ನಿಕ್‌, ಪಿ.ಚಿದಂಬರಂ ಹಿರಿಯ ವಕ್ತಾರರಾಗಿ ಮುಂದುವರೆಯಲಿದ್ದಾರೆ.

Dinesh Gundu Rao is new spokesperson of State Congress

17 ಮಂದಿ ವಕ್ತಾರರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದ್ದು, ವಕ್ತಾರರ ಪಟ್ಟಿಯಲ್ಲಿ ದಿನೇಶ್‌ ಗುಂಡೂರಾವ್‌, ನಟಿ ಖುಷ್ಬೂ ಹೊಸ ಸೇರ್ಪಡೆ. ಪಟ್ಟಿಯಲ್ಲಿ ವಕ್ತಾರರ ಸಂಖ್ಯೆ 36ಕ್ಕೇರಿದೆ. ಮನೀಶ್ ತಿವಾರಿ ಹೆಸರು ಎಲ್ಲೂ ಕಂಡು ಬಂದಿಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.[ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿಗೆ ಪಟ್ಟಾಭಿಷೇಕ]

Khushboo

31 ಮಂದಿ ಟೀವಿ ಪ್ಯಾನೆಲಿಸ್ಟ್‌ರನ್ನೂ ಹೆಸರಿಸಲಾಗಿದ್ದು, ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರ ಪುತ್ರಿ ಶರ್ಮಿಷ್ಠ ಮುಖರ್ಜಿ ಅವರ ಜೊತೆ ಮನೀಶ್ ತಿವಾರಿ, ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣಿತಿ ಶಿಂಧೆ ಕಾಣಿಸಿಕೊಳ್ಳಲಿದ್ದಾರೆ.

ಮಾಧ್ಯಮ ವಿಭಾಗದಲ್ಲಿ ರಾಜೀಶ್ ಶುಕ್ಲಾ, ಜಮ್ಮು ಮತ್ತು ಕಾಶ್ಮೀರ ಪಿಸಿಸಿ ಮುಖ್ಯಸ್ಥ ಸೈಫುದ್ದೀನ್ ಸೋಜ್ ಪುತ್ರ ಸಲ್ಮಾನ್ ಸೋಜ್, ಕೇಂದ್ರ ಮಾಜಿ ಸಚಿವ ವಿಲಾಸ್ ರಾವ್ ದೇಶ್ ಮುಖ್ ಪುತ್ರ ಅಮಿತ್ ದೇಶ್ ಮುಖ್, ಮಾಜಿ ಉಪಾಧ್ಯಕ್ಷ ಕೃಷ್ಣಕಾಂತ್ ಪುತ್ರ ರಶ್ಮಿ ಕಾಂತ್, ಮಹಾರಾಷ್ಟ್ರ ವಕ್ತಾರ ಅನಂತ್ ಗಾಡ್ಗೀಳ್ ಪ್ರಮುಖರಾಗಿದ್ದಾರೆ.

English summary
Karnataka Minister for Food and Civil Supplies Dinesh Gundu Rao has been appointed as the Spokesperson of the Congress in the State by the party high command. The party also appointed 17 spokespersons, including film star Khushboo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X