ಡಿಸೆಂಬರ್ 15 ರವರೆಗೆ ನೋಟು ಚಲಾವಣೆಗೆ ಅವಕಾಶ

ಡಿಸೆಂಬರ್ 15ರ ವರೆಗೆ ನಿಷೇಧಿತ ರೂ.500 ಹಾಗು ರೂ.1000 ಮುಖಬೆಲೆಯ ನೋಟುಗಳನ್ನು ಸರ್ಕಾರಿ ಸೇವೆಗಳಿಗೆ ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನವದೆಹಲಿ, ನವೆಂಬರ್, 24: ನಿಷೇಧಿತ ರೂ.500 ಹಾಗು 1,000 ಮುಖಬೆಲೆಯ ನೋಟುಗಳ ಚಲಾವಣೆಗೆ ಗುರುವಾರ ಮಧ್ಯರಾತ್ರಿ ವರೆಗೆ ಮಾತ್ರ ಇದ್ದ ಅವಕಾಶವನ್ನು ಡಿಸೆಂಬರ್ 15ರ ವರಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಇನ್ನು ಶನಿವಾರದಿಂದ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಮಯ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.

ಆದರೆ ಹಳೆಯ ನೋಟುಗಳನ್ನು ಪೆಟ್ರೋಲ್ ಬಂಕ್, ಆಸ್ಪತ್ರೆ, ಸರ್ಕಾರಿ ಶಾಲೆಗಳು ಮೆಟ್ರೋದಂತಹ ಸರ್ಕಾರಿ ಸೇವೆಗಳಿಗೆ ಬಳಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

Demonetisation tightens: No more exchange of Rs 500 and Rs 1000 notes

ಆದರೆ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸುತ್ತೋಲೆ ಹೊರಡಿಸಿದೆ.

ಇನ್ನು ವಿದೇಶಿಗರು ತಮ್ಮ ಕರೆನ್ಸಿಯನ್ನು ಭಾರತೀಯ ಕರೆನ್ಸಿಗೆ ವಿನಿಮಯಮಾಡಿಕೊಳ್ಳಬಹುದಾಗಿದ್ದು, ವಿನಿಮಯ ಮಿತಿಯನ್ನು 5, ಸಾವಿರ ರೂ.ಗೆ ಸೀಮಿತಗೊಳಿಸಲಾಗಿದೆ.

ಡಿಸೆಂಬರ್ 3ರಿಂದ 15 ರವರೆಗೆ ಟೋಲ್ ಗೇಟ್ ಗಳಲ್ಲಿ ಹಳೆಯ ನೋಟುಗಳನ್ನು ಬಳಸಿ ಟೋಲ್ ಶುಲ್ಕ ಪಾವತಿಸಬಹುದು ಎಂದು ಆರ್ ಬಿ ಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+