ಕಳೆದ 58 ವರ್ಷಗಳಲ್ಲಿ ಅನುಭವಿಸದಂಥ ಚಳಿಗೆ ದೆಹಲಿ ತತ್ತರ

ನವದೆಹಲಿ, ನ.01: ಈ ಬಾರಿಯ ಚಳಿಗಾಲದ ಆರಂಭದಲ್ಲೇ ದೆಹಲಿ ಗಢಗಢ ನಡುಗಿದೆ. ಕಳೆದ 58 ವರ್ಷಗಳಲ್ಲೇ ಕಾಣದಂಥ, ಅನುಭವಿಸದಂಥ ಭಾರಿ ಚಳಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ದಾಖಲಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 1937ರ ಅಕ್ಟೋಬರ್‌ 31ರಂದು 9.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ವರದಿಯಾಗಿತ್ತು. 1962ರಲ್ಲಿ 16.9 ಡಿಗ್ರಿಸೆಲ್ಸಿಯಸ್ ದಾಖಲಾಗಿತ್ತು. 1994ರಲ್ಲಿ 12.5 ಡಿಗಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬಂದಿತ್ತು.

ಭಾನುವಾರ(ನ.1) ಬೆಳಗ್ಗೆ 11.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಈ ಋತುವಿನ ಅತಿ ಕನಿಷ್ಠ ತಾಪಮಾನ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

Delhi witnesses coldest October in 58 years

ಅಕ್ಟೋಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಕನಿಷ್ಠ ತಾಪಮಾನ ಸರಾಸರಿ 19.1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ನವೆಂಬರ್‌ ಮೊದಲ ವಾರದಲ್ಲಿ15 ರಿಂದ 16 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ತಿಂಗಳಿನಂತೆ ನವೆಂಬರ್ ತಿಂಗಳಲ್ಲೂ ಅಧಿಕ ಚಳಿ ಕಂಡು ಬರಲಿದ್ದು, ನವೆಂಬರ್‌ ತಿಂಗಳಾಂತ್ಯದಲ್ಲಿ 11-12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಐಎಂಡಿ ವರದಿ ಮಾಡಿದೆ.

ದೆಹಲಿಯಲ್ಲಿ ಹೊಗೆ ಮಂಜು ಕವಿದ ವಾತಾವರಣ ಗಾಳಿ ಕಡಿಮೆ ಇರುವುದು ಕನಿಷ್ಠ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ,ಪರ್ವತ ಪ್ರದೇಶಗಳಲ್ಲಿ ಇನ್ನೂ ಹಿಮಪಾತ ಆರಂಭವಾಗಿಲ್ಲ, ಹಿಮಪಾತ ಶುರುವಾದರೆ, ದೆಹಲಿಯಲ್ಲಿ ಹವಾಮಾನ ತಂಪಾಗಲಿದೆ ಎಂದು ಸ್ಥಳೀಯ ಐಎಂಡಿ ಕೇಂದ್ರದ ಮುಖ್ಯಸ್ಥ ಕುಲ್‌ದೀಪ್‌ ಶ್ರೀವಾಸ್ತವ್‌ ಹೇಳಿದ್ದಾರೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+