ದೆಹಲಿ: ಅತ್ಯಾಚಾರಿ ಟ್ಯಾಕ್ಸಿ ಚಾಲಕ ಬಂಧನ
ನವದೆಹಲಿ, ಡಿ.7: ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಗುರ್‌ಗಾಂವ್ ನಲ್ಲಿ ಡಿನ್ನರ್ ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ 27 ವರ್ಷ ಮಹಿಳೆ ಮೇಲೆ ಕ್ಯಾಬ್ ನಲ್ಲೇ ಟ್ಯಾಕ್ಸಿ ಚಾಲಕನೊಬ್ಬ ಅತ್ಯಾಚಾರಗೈದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಥುರಾ ಮೂಲದ 32 ವರ್ಷ ವಯಸ್ಸಿನ ಶಿವಕುಮಾರ್ ಯಾದವ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. [ಚಲಿಸುತ್ತಿರುವ ವಾಹನದಲ್ಲಿ ನಡೆದ ಅತ್ಯಾಚಾರಗಳು]
ಘಟನೆ ವಿವರ: ಎಂಎನ್‌ಸಿಯೊಂದರಲ್ಲಿ ಉದ್ಯೋಗಿಯಾಗಿರುವ 27ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಗುರ್ ಗಾಂವ್ ನಲ್ಲಿ ಡಿನ್ನರ್ ಪಾರ್ಟಿಯೊಂದಕ್ಕೆ ಹೋಗಿದ್ದಳು. ಪಾರ್ಟಿ ಮುಗಿಸಿಕೊಂಡು ಮನೆಗೆ ಹೊರಟಳು. ವಸಂತ್ ವಿಹಾರ್ ವರೆಗೆ ತನ್ನ ಗೆಳೆಯ ಗೆಳತಿಯರೊಂದಿಗೆ ಬಂದಿದ್ದಾಳೆ .
ನಂತರ ಅಲ್ಲಿಂದ ಮನೆಗೆ ತೆರಳಲು ರಾತ್ರಿ 9.30ರ ಸುಮಾರಿಗೆ ಕ್ಯಾಬ್ ಹತ್ತಿದ್ದಾಳೆ. ಕ್ಯಾಬ್‌ನ ಹಿಂದಿನ ಸೀಟಿನಲ್ಲಿ ಕುಳಿತ ಈಕೆಗೆ ನಿದ್ದೆ ಬಂದಿದೆ. ನಿದ್ದೆಯಿಂದ ಎದ್ದಾಗ ಕಾರು ರೋಹಿಲ್ಲಾ ಮತ್ತು ಇಂದ್ರಲೋಕ್ ಪ್ರದೇಶದಲ್ಲಿ ನಿಲ್ಲಿಸಿರುವುದು ಕಂಡು ಬಂದಿದೆ. ಕಾದಿನ ಡೋರ್ ಲಾಕ್ ಆಗಿದೆ. ಚಾಲಕ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಯುವತಿ ಪ್ರತಿಭಟನೆ ನಡುವೆಯೂ ಅತ್ಯಾಚಾರ ನಡೆದುಹೋಗಿದೆ. ನಂತರ ಇಂದ್ರಲೋಕ್ ಪ್ರದೇಶದಲ್ಲಿರುವ ಆಕೆ ಮನೆಯ ಬಳಿ ಆಕೆಯನ್ನು ಬಿಟ್ಟ ಕಾರು ಚಾಲಕ, ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಮೊಬೈಲಿನಿಂದ ಕಾರಿನ ನಂಬರ್ ಪ್ಲೇಟ್ ಫೋಟೋ ತೆಗೆದು ಪೊಲೀಸರಿಗೆ ದೂರು ನೀಡಿದ್ದಾಳೆ.
Focus should be on the punishment more than the crime: Shamina Shafiq (NCW) on Delhi girl allegedly raped in a cab pic.twitter.com/OKBDYGBh58
— ANI (@ANI_news) December 7, 2014 ದೂರಿನ ಅನ್ವಯ ಸರಾಯ್ ರೋಹಿಲ್ಲಾ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ಐಪಿಸಿ 376, 323 ಹಾಗೂ 506 ಪರಿಚ್ಛೇದದಡಿಯಲ್ಲಿ ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆ ಮೇಲೆ ಅತ್ಯಾಚಾರ ನಡೆದಿರುವುದು ವರದಿಯಿಂದ ದೃಢಪಟ್ಟಿದೆ.[ನಿರ್ಭಯಾಳ ಬರ್ಬರ ಅತ್ಯಾಚಾರಕ್ಕೆ ಒಂದು ವರ್ಷ!]
ಟ್ಯಾಕ್ಸಿ ಸಂಸ್ಥೆ ಪ್ರತಿಕ್ರಿಯೆ: ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ Uber ಟ್ಯಾಕ್ಸಿ ಸಂಸ್ಥೆ ನಾವು ಟ್ಯಾಕ್ಸಿ ಚಾಲಕನನ್ನು ಈಗಾಗಲೇ ಕರ್ತವ್ಯದಿಂದ ಅಮಾನತುಗೊಳಿಸಿದ್ದೇವೆ. ಖಾಸಗಿ ಕಂಪನಿ ಉದ್ಯೋಗಿಗಳನ್ನು ಕರೆದೊಯ್ಯಲು ಕ್ಯಾಬ್ ಬಳಕೆಯಾಗುತ್ತಿತ್ತು. ವಾರಂತ್ಯವಾಗಿದ್ದರಿಂದ ಉದ್ಯೋಗಿಗಳನ್ನು ಮನೆಗೆ ಬಿಟ್ಟ ನಂತರ ಚಾಲಕ ತನ್ನ ಜಿಪಿಎಸ್ ಸಿಸ್ಟಮ್ ಬಂದ್ ಮಾಡಿದ್ದಾನೆ. ನಂತರ ಈ ಕೃತ್ಯ ಎಸಗಿದ್ದಾನೆ. ಹೀಗಾಗಿ ನಮಗೆ ಟ್ರ್ಯಾಕ್ ಮಾಡಲು ಆಗಲಿಲ್ಲ ಎಂದು ಸಂಸ್ಥೆ ಪ್ರತಿಕ್ರಿಯಿಸಿದೆ.












Click it and Unblock the Notifications