ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಫಲಿತಾಂಶ : ಕುತೂಹಲ ಘಟ್ಟದಲ್ಲಿ ಲೆಕ್ಕಾಚಾರ

By Mahesh
|
Google Oneindia Kannada News

ನವದೆಹಲಿ, ಡಿ.8: ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆ ಭಾನುವಾರ ನಡೆಯಿತು. ಮಿಜೋರಾಂ ರಾಜ್ಯದಲ್ಲಿ ಮತ ಎಣಿಕೆ ಡಿ.9ಕ್ಕೆ ನಡೆಯಲಿದೆ.

ಬಿಜೆಪಿ ನಾಯಕರು ನಿನ್ನೆ ತಡರಾತ್ರಿ ತನಕ ಅರವಿಂದ್ ಕೇಜ್ರಿವಾಲ ಅವರ ಮೊಬೈಲ್ ಗೆ ಸಂದೇಶಗಳನ್ನು ಕಳಿಸುತ್ತಿದ್ದರು ಹಾಗೂ ಏಳಕ್ಕೂ ಅಧಿಕ ಆಮ್ ಆದ್ಮಿ ಅಭ್ಯರ್ಥಿಗಳನ್ನು ಸೆಳೆಯಲು ಯತ್ನಿಸುತ್ತಿದ್ದರು ಎಂಬ ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಅರವಿಂದ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾತುರರಾಗಿದ್ದರು. ಆದರೆ, ಕೇಜ್ರಿವಾಲ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಪಕ್ಷದ ಜತೆ ಕೈ ಜೋಡಿಸುವುದಿಲ್ಲ ಎಂದಿದ್ದಾರೆ. ಈ ನಡುವೆ ಬಿಜೆಪಿ ಮುನ್ನಡೆ ಗಮನಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೆಹಲಿಗೆ ಆಗಮಿಸಿ ಸ್ಥಳೀಯ ನಾಯಕರೊಡನೆ ಚರ್ಚೆ ನಡೆಸಿದ್ದಾರೆ.

ಸಮಯ 3.20: ಬಿಜೆಪಿ : 21: ಎಎಪಿ : 18; ಕಾಂಗ್ರೆಸ್ : 4 ; ಇತರೆ : 1 (ಗೆಲುವು)
* ಬಿಜೆಪಿ : 13 (+11): ಎಎಪಿ : 8 (+26); ಕಾಂಗ್ರೆಸ್ : 4 (-35); ಇತರೆ : 0(-3) (70/70 ಮುನ್ನಡೆ)
ಸಮಯ 2.45 :
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ ಅವರು ಶೀಲಾದೀಕ್ಷಿತ್ ಅವರನ್ನು ಸೋಲಿಸಿ ಮೊದಲ ಗೆಲುವಿನ ರುಚಿ ಕಂಡಿದ್ದಾರೆ.
* ಬಿಜೆಪಿ ಸಿಎಂ ಅಭ್ಯರ್ಥಿ ಡಾ. ಹರ್ಷವರ್ಧನ್ ಕೃಷ್ಣನಗರ ಕ್ಷೇತ್ರದಲ್ಲಿ ಗೆಲುವು. ಕಾಂಗ್ರೆಸ್ಸಿನ ವಿಕೆ ಮೋಂಗಾ ಅವರನ್ನು 30 ಸಾವಿರ ಮತಗಳಿಂದ ಸೋಲಿಸಿದ್ದಾರೆ.
ಸಮಯ 2.25 :
ಎಎಪಿಯ ಸ್ಟಾರ್ ಸ್ಪರ್ಧಿ ಶಾಜಿಯಾ ಲಿಮಿಗೆ ಆರ್ ಕೆ ಪುರಂ ಕ್ಷೇತ್ರದಲ್ಲಿ 340 ಮತಗಳಿಂದ ಪರಾಭವ. ಸ್ಟಾರ್ ನ್ಯೂಸ್ ನಲ್ಲಿ ವಾರ್ತಾ ವಾಚಕಿಯಾಗಿದ್ದ ಲಿಮಿ, ನಂತರ ಸಾಮಾಜಿಕ ಕಾರ್ಯಕರ್ತೆಯಾಗಿ ಎಎಪಿ ಸೇರಿ ಚುನಾವಣಾ ಕಣಕ್ಕಿಳಿದಿದ್ದರು
ಸಮಯ 1.25 :
ಬಿಜೆಪಿ : 12: ಎಎಪಿ : 11; ಕಾಂಗ್ರೆಸ್ : 4 ; ಇತರೆ : 1 (ಗೆಲುವು)
* ಬಿಜೆಪಿ : 20 (+9): ಎಎಪಿ : 18 (+29); ಕಾಂಗ್ರೆಸ್ : 4 (-35); ಇತರೆ : 0(-3) (70/70 ಮುನ್ನಡೆ)
ಸಮಯ 1.25 :
ಬಿಜೆಪಿ : 29 (+10): ಎಎಪಿ : 23 (+28); ಕಾಂಗ್ರೆಸ್ : 8 (-35); ಇತರೆ : 0(-3) (70/70 ಮುನ್ನಡೆ)
* ಬಿಜೆಪಿ 4 ಕ್ಷೇತ್ರ, ಎಎಪಿ 5 ಕ್ಷೇತ್ರ, ಇತರೆ 1 ಕ್ಷೇತ್ರದಲ್ಲಿ ಗೆಲುವು

Delhi poll result updates: Counting of votes begins in Delhi

ಸಮಯ 12.40 :
ಬಿಜೆಪಿ : 32 (+11): ಎಎಪಿ : 24 (+27); ಕಾಂಗ್ರೆಸ್ : 7 (-36); ಇತರೆ : 2(-2) (70/70 ಮುನ್ನಡೆ)
* ಬಿಜೆಪಿ ಎರಡು ಕ್ಷೇತ್ರ, ಎಎಪಿಗೆ ಅಂಬೇಡ್ಕರ್ ನಗರ, ಡಿಯೋಲಿ, ಸಂಗಮ್ ವಿಹಾರ್, ಷಾಕುರ್ ಬಸ್ತಿ ಕ್ಷೇತ್ರಗಳಲ್ಲಿ ಗೆಲುವು
ಸಮಯ 12.25 :
ಬಿಜೆಪಿ : 33 (+12): ಎಎಪಿ : 24 (+26); ಕಾಂಗ್ರೆಸ್ : 7 (-36); ಇತರೆ : 2(-2) (70/70 ಮುನ್ನಡೆ)
* ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ ತಲಾ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
ಸಮಯ 12.05 :
ಬಿಜೆಪಿ : 32 (+9): ಎಎಪಿ : 24 (+24); ಕಾಂಗ್ರೆಸ್ : 11 (-32); ಇತರೆ : 3(-1) (70/70 ಮುನ್ನಡೆ)
* ಹಾಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಮಯ 11.45 :
ಬಿಜೆಪಿ : 37 (+14): ಎಎಪಿ : 21 (+21); ಕಾಂಗ್ರೆಸ್ : 8 (-35); ಇತರೆ : 4 (70/70 ಮುನ್ನಡೆ)
ಸಮಯ 11.30 :
ಬಿಜೆಪಿ : 37 (+14): ಎಎಪಿ : 20 (+20); ಕಾಂಗ್ರೆಸ್ : 9 (-34); ಇತರೆ : 4 (70/70 ಮುನ್ನಡೆ)
ಸಮಯ 11.20:
ಎಎಪಿ ಏನಾದರೂ ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಕೈಜೋಡಿಸಿದರೆ ಖಿಚಡಿ ಸರ್ಕಾರವಾಗುತ್ತದೆ. ಅರವಿಂದ್ ಅವರ ತಂಡದ ಯಶಸ್ಸಿನಿಂದ ಖುಷಿಯಾಗಿದೆ. ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ಇದ್ದಾರೆ ಎಂಬುದು ಸಾಬೀತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ಸಮಯ 11.15 :
ಬಿಜೆಪಿ : 35 (+12): ಎಎಪಿ : 25 (+25); ಕಾಂಗ್ರೆಸ್ : 7 (-36); ಇತರೆ : 3(-1) (70/70 ಮುನ್ನಡೆ)
ಸಮಯ 10.50 :
ಬಿಜೆಪಿ : 34 (+11): ಎಎಪಿ : 24(+24); ಕಾಂಗ್ರೆಸ್ : 9 (-34); ಇತರೆ : 3(-1) (70/70 ಮುನ್ನಡೆ)
ಸಮಯ 10:
40 :ಬಿಜೆಪಿ : 33 (+10): ಎಎಪಿ : 24(+24); ಕಾಂಗ್ರೆಸ್ : 1೦ (-33); ಇತರೆ : 3(-1) (70/70 ಮುನ್ನಡೆ)
ಸಮಯ 10.30 :
ಎಎಪಿ ಜತೆ ಕೈಜೋಡಿಸುವ ಸಾಧ್ಯತೆ ಅಲ್ಲಗೆಳೆದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್
* ಎಎಪಿ ಜತೆ ಮೈತ್ರಿ ಸಾಧ್ಯತೆ ಬಗ್ಗೆ ಈಗಲೇ ಏನು ಹೇಳಲಾಗದು ಎಂದು ಕಾಂಗ್ರೆಸ್ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ.
* ದೆಹಲಿಯಲ್ಲಿ ಯಾರೂ ಮೈತ್ರಿ ಸಾಧಿಸದೆ 34 ಸೀಟುಗಳ ಗಡಿ ದಾಟದಿದ್ದರೆ ತ್ರಿಶಂಕು ಸ್ಥಿತಿ ಬಂದರೆ ಏನು ಮಾಡುವುದು? ಉತ್ತರ ಇಲ್ಲಿ ಓದಿ

ಸಮಯ 10.20: ಬಿಜೆಪಿ : 30: ಎಎಪಿ : 25; ಕಾಂಗ್ರೆಸ್ : 14; ಇತರೆ : 1 (70/10 ಮುನ್ನಡೆ)
ಸಮಯ 10.15:
ಅರವಿಂದ್ ಕೇಜ್ರಿವಾಲ ಅವರು ದೆಹಲಿ ಕ್ಷೇತ್ರದಲ್ಲಿ 2000 ಮತಗಳಿಂದ ಮುನ್ನಡೆ
*
ಅತ್ತ ರಾಜಸ್ಥಾನದಲ್ಲಿ 31 ವರ್ಷಗಳ ನಂತರ ಬಿಜೆಪಿ ಅಧಿಕಾರ ಗದ್ದುಗೆ ಏರಲು ಸಿದ್ಧತೆ.

ಸಮಯ 10.00: ಬಿಜೆಪಿ 34; ಎಎಪಿ 24, ಕಾಂಗ್ರೆಸ್ 9, ಇತರೆ 2
ಸಮಯ 9.50 :
ಶೀಲಾ ದೀಕ್ಷಿತ್ ಹಿಂದಕ್ಕೆ ಹಾಕಿ 1500 ಮತಗಳ ಮುನ್ನಡೆ ಪಡೆದ ಅರವಿಂದ್
* ಬಿಜೆಪಿ 32; ಎಎಪಿ 24, ಕಾಂಗ್ರೆಸ್ 9, ಇತರೆ 2
ಸಮಯ 9.35:
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ ಆರಂಭಿಕ ಹಿನ್ನಡೆ ಅನುಭವಿಸಿದಾರೆ.
ಸಮಯ 9.30:
ದೆಹಲಿಗೆ ಇಂದು ಸಂಜೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಮನ ನಿರೀಕ್ಷೆ
* ಬಿಜೆಪಿಯ ದೆಹಲಿ ಮುಖ್ಯಮಂತ್ರಿ ಹರ್ಷವರ್ಧನ್ ಅವರು ಕೃಷ್ಣನಗರ ಕ್ಷೇತ್ರದಲ್ಲಿ ಮುನ್ನಡೆ ಪಡೆದಿದ್ದಾರೆ.

* ಕಾಂಗ್ರೆಸ್ ಕ್ಷೇತ್ರಗಳಲ್ಲಿ ಎಎಪಿ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಬಿಜೆಪಿ ಜತೆ ನೇರ ಹಣಾಹಣಿ ನಡೆಸಿದೆ.

ಸಮಯ 9.20: ಬಿಜೆಪಿ 21; ಎಎಪಿ :18, ಕಾಂಗ್ರೆಸ್ 8, ಇತರೆ 3
ಸಮಯ 9.10:
ಬಿಜೆಪಿ 14; ಎಎಪಿ 13, ಕಾಂಗ್ರೆಸ್, ಬಿಎಸ್ ಪಿ ತಲಾ 6 ಕ್ಷೇತ್ರಗಳಲ್ಲಿ ಮುನ್ನಡೆ

ಸಮಯ 9.00
: ಬಿಜೆಪಿ 10; ಎಎಪಿ 6, ಕಾಂಗ್ರೆಸ್, ಬಿಎಸ್ ಪಿ ತಲಾ 5 ಕ್ಷೇತ್ರಗಳಲ್ಲಿ ಮುನ್ನಡೆ
* ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಮುನ್ನಡೆ
* ಬಹುಜನ ಸಮಾಜವಾದಿ ಪಕ್ಷ ಮುನ್ನಡೆ ರಾಜಕೀಯ ಪಂಡಿತರಿಗೆ ಅಚ್ಚರಿ ಮೂಡಿಸಿದೆ.

ಸಮಯ 8.50 : ಬಿಜೆಪಿ 7 ಸ್ಥಾನದಲ್ಲಿ ಮುನ್ನಡೆ, ಎಎಪಿ 5 ರಲ್ಲಿ ಮುನ್ನಡೆ, ಕಾಂಗ್ರೆಸ್ 3 ರಲ್ಲಿ
ಸಮಯ 8.30 : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಎರಡು ಕ್ಷೇತ್ರದಲ್ಲಿ ಮುನ್ನಡೆ ಪಡೆದಿದ್ದರೆ, ಬಿಜೆಪಿ ಎರಡು ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ.

ಸಮಯ 8.00 : ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮುಂಜಾನೆಯಿಂದಲೆ ಬಿರುಸಿನ ಚಟುವಟಿಕೆ ಉತ್ಸಾಹ ಕಂಡುಬಂದಿದೆ. ಆದರೆ, ಅರವಿಂದ್ ಕೇಜ್ರಿವಾಲ ಅವರು ಮಾತ್ರ ಯಾಕೋ ಯಾವುದೇ ಪ್ರತಿಕ್ರಿಯೆ ನೀಡಿದರೆ ಮೌನವಹಿಸಿದ್ದಾರೆ.

ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸತತ 4ನೆ ಬಾರಿಗೆ ಗದ್ದುಗೆಯೇರಲು ಬಯಸಿದ್ದರೆ, ಹರ್ಷವರ್ಧನ್ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಆದರೆ, ಅರವಿಂದ ಕೇಜ್ರಿವಾಲರ ಎಎಪಿ, ಕಠಿಣ ಸವಾಲಾಗಿ ಈ ಎರಡು ಪಕ್ಷಗಳ ನಿದ್ದೆಗೆಡಿಸಿದೆ. ದೆಹಲಿಯ 70 ಸ್ಥಾನಗಳಿಗೆ 810 ಮಂದಿ ಸ್ಪರ್ಧಿಸಿದ್ದಾರೆ.

ಕಳೆದ 5 ವರ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ದೆಹಲಿ ವಿಧಾನ­ಸಭಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಒಟ್ಟು 108 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲಾ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2008ರಲ್ಲಿ 92 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.

ಕಾಂಗ್ರೆಸ್ ಹಾಗೂ ಎಎಪಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದ್ದರೆ, ಬಿಜೆಪಿ 66 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿ, ಉಳಿದವುಗಳನ್ನು ಮಿತ್ರಪಕ್ಷ ಎಸ್‌ಎಡಿಗೆ ಬಿಟ್ಟುಕೊಟ್ಟಿದೆ. 2008ರಲ್ಲಿ ಕಾಂಗ್ರೆಸ್ 43 ಸ್ಥಾನ ಗಳಿಸಿತ್ತು, ಬಿಜೆಪಿ 23 ಕ್ಷೇತ್ರದಲ್ಲಿ ಮಾತ್ರ ಜಯಭೇರಿ ಬಾರಿಸಿತ್ತು. 4 ಸ್ಥಾನ ಇತರೆ ಅಭ್ಯರ್ಥಿಗಳ ಪಾಲಾಗಿತ್ತು.

English summary
Delhi gears up for a power packed day as the counting for the Delhi assembly polls takes place today. The Delhi poll result is going to be different this year as it was a three way fight between BJP, Congress and the AAP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X