ಲಾಕ್‌ಡೌನ್‌ ಕರ್ತವ್ಯದ ವೇಳೆ ಪೊಲೀಸರಿಗೆ ಕೊರೊನಾ ಬಂದ್ರೆ 1 ಲಕ್ಷ ಪರಿಹಾರ

ದೆಹಲಿ, ಏಪ್ರಿಲ್ 17; ಕೊರೊನಾ ಸೋಂಕು ಹರಡದಂತೆ ಹೋರಾಡುತ್ತಿರರುವ ಪೈಕಿ ಪೊಲೀಸ್ ಇಲಾಖೆಯೂ ಒಂದು. ಜನರನ್ನು ರಸ್ತೆಗೆ ಬರದಂತೆ ನಿಯಂತ್ರಿಸಿ ಲಾಕ್‌ಡೌನ್‌ ಯಶಸ್ವಿಗೊಳಿಸಲು ಪೊಲೀಸರು ರಾತ್ರಿ ಹಗಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೇಶದಲ್ಲಿ ಈಗಾಗಲೇ ಹಲವು ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕ ಹಾಗೂ ಅವರ ಕುಟುಂಬದವರ ಸಂಪರ್ಕದಿಂದ ಪೊಲೀಸರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಹಲವು ಪೊಲೀಸರು ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ.

Delhi Police Who Tests Positive For COVID19 They 1 Lakh

ಇದೀಗ, ಲಾಕ್‌ಡೌನ್‌ ಕರ್ತವ್ಯದ ವೇಳೆ ಯಾವ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದರೆ, ಅವರಿಗೆ ಪರಿಹಾರವಾಗಿ 1 ಲಕ್ಷ ಹಣ ನೀಡಲಾಗುವುದು ಎಂದು ದೆಹಲಿ ಪೊಲೀಸ್ ಆಯುಕ್ತರು ಘೋಷಿಸಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್ ಅಥವಾ ಇನ್ನಿತರ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಧನವಾಗಿ ನೀಡಲಾಗುವುದು ಎಂದು ಪ್ರಕಟಿಸಿದ್ದರು.

ಅಂದ್ಹಾಗೆ, ದೆಹಲಿಯಲ್ಲಿ ಇದುವರೆಗೂ 1707 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. 42 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 72 ಜನರು ಕೊವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+