• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾರ್ಟಿಗೆ ಹಣ ಕೊಡಲಿಲ್ಲ ಎಂದು ಅಜ್ಜಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ

|

ನವದೆಹಲಿ, ಡಿಸೆಂಬರ್ 29: ಹೊಸ ವರ್ಷದ ಪಾರ್ಟಿಗೆ ಹಣ ಕೊಡಲಿಲ್ಲ ಎಂದು 19 ವರ್ಷದ ಅಪ್ರಾಪ್ತ ಬಾಲಕ ಸುತ್ತಿಗೆಯಿಂದ ಹೊಡೆದು ಅಜ್ಜಿಯನ್ನೇ ಹತ್ಯೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಭಾನುವಾರ ಪೊಲೀಸರಿಗೆ ದೆಹಲಿಯ ಶಾಹ್ದಾರಾದಿಂದ ಫೋನ್ ಕರೆ ಬಂದಿತ್ತು. ವಯಸ್ಸಾದ ಮಹಿಳೆಯೊಬ್ಬರಿಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಸೆಟ್ ಟಾಪ್ ಬಾಕ್ಸ್ ರೀಚಾರ್ಜ್ ನೆಪದಲ್ಲಿ ಬಂದ ಹಂತಕನಿಂದ ದಂತವೈದ್ಯೆ ಹತ್ಯೆ

ಪೊಲೀಸ್ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸತೀಶ್ ಜಾಲಿ ಅವರು ಮೃತರು, ಅವರು ಶಾಹ್ದಾರಾನಗರದಲ್ಲಿ ವಾಸವಿದ್ದರು, ಮನೆಯ ನೆಲಮಹಡಿಯಲ್ಲಿ ಅವರು ವಾಸವಿದ್ದರು. ಅವರ ಮಗ ಸಂಜಯ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೊದಲ ಮಹಡಿಯಲ್ಲಿ ವಾಸವಿದ್ದಾರೆ. ಎರಡನೆಯ ಮಗ ಮನೋಜ್ ಮನೆಯ ಹತ್ತಿರದಲ್ಲೇ ಇದ್ದಾರೆ.

ಪೊಲೀಸರ ಪ್ರಕಾರ ಸತೀಶ್ ಜಾಲಿಯ ಮೊಮ್ಮಗ ಹೊಸ ವರ್ಷ ಪಾರ್ಟಿ ಮಾಡಬೇಕು ಹಣ ಕೊಡಿ ಎಂದು ಕೇಳಿದ್ದ, ಆದರೆ ಜಾಲಿ ನಿರಾಕರಿಸಿದ್ದರು. ಅದಕ್ಕೆ ಕೋಪಗೊಂಡು ಸುತ್ತಿಗೆಯಿಂದ ಹೊಡೆದು ಅವರನ್ನು ಹತ್ಯೆ ಮಾಡಿ 18 ಸಾವಿರ ಕದ್ದು ಪರಾರಿಯಾಗಿದ್ದ.

ಜಾಲಿ ಮಗ ಮನೆಯಿಂದ ಕೆಳಗೆ ಬಂದಿದ್ದ, ತಾಯಿಯ ಮನೆ ಲಾಕ್ ಆಗಿರುವುದು ನೋಡಿದ್ದಾರೆ, ತನ್ನ ಸಹೋದರನಿಗೆ ಕರೆ ಮಾಡಿದ್ದಾರೆ, ಬಳಿಕ ಮನೆಯ ಬಾಗಿಲು ತೆಗೆದು ಒಳಗೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವವನ್ನು ನೋಡಿ ಕಂಗಾಲಾಗಿದ್ದಾರೆ.

ಪೊಲೀಸರು ತನಿಖೆ ನಡೆಸಿದಾಗ ಕರಣ್ ಅಂಗಡಿಯೊಂದರಲ್ಲಿ ಸುತ್ತಿಗೆ ಕೊಂಡುಕೊಂಡಿದ್ದು ತಿಳಿದುಬಂದಿದೆ. ಬಳಿಕ ಕರಣ್‌ನನ್ನು ಪೊಲೀಸರು ಬಂಧಿಸಿದ್ದಾರೆ.

English summary
A 19-year-old man has been arrested for allegedly murdering his 73-year-old grandmother - by hitting her on the head with a hammer - after she refused to give lend him money for a New Year's party, Delhi Police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X