ಗುಪ್ತಚರ ಸಂಸ್ಥೆ ಅಧಿಕಾರಿ ಅನನ್ಯ ನಿಗೂಢ ಸಾವು
ನವದೆಹಲಿ,
ಮಾ.3: ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್(RAW)ನ ಅಧಿಕಾರಿಯೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾವು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಮೃತಪಟ್ಟ
ಅಧಿಕಾರಿಯನ್ನು ಅನನ್ಯ ಚಕ್ರವರ್ತಿ(52) ಎಂದು ಗುರುತಿಸಲಾಗಿದ್ದು, ಇವರು ಗುಪ್ತಚರ ಸಂಸ್ಥೆ Raw ದಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಶವ ಫ್ಯಾನಿಗೆ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ನೆಲದ ಮೇಲೆ ಬಿದ್ದಿದ್ದ ಪತ್ನಿ, ಪುತ್ರ, ಪುತ್ರಿಯ ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅನನ್ಯ ರಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಈ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.id='are-slot-2' class='oiad oi-axt oiadv'>












Click it and Unblock the Notifications