India
  • search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ-ಗುರುಗ್ರಾಮ ಗಡಿ ಬಂದ್: ವಾಹನ ಸವಾರರ ಪ್ರತಿಭಟನೆ

|
Google Oneindia Kannada News

ನವದೆಹಲಿ, ಮೇ 29: ಹರ್ಯಾಣದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಹರ್ಯಾಣಾ ಸಂಪರ್ಕಿಸುವ ದಾರಿಯನ್ನು ಬಂದ್ ಮಾಡಿದ್ದಾರೆ.

ಹೀಗಾಗಿ ಹರ್ಯಾಣಾದಿಂದ ದೆಹಲಿಗೆ ಹೊರಟಿದ್ದ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದೆಹಲಿಯಿಂದ ಗುರುಗ್ರಾಮಕ್ಕೆ ಹೊರಟಿದ್ದ ಹಾಗೂ ಗುರುಗ್ರಾಮದಿಂದ ದೆಹಲಿ ಕಡೆಗೆ ತೆರಳುತ್ತಿದ್ದ ಎಲ್ಲಾ ವಾಹನಗಳ ಸಂಚಾರಕ್ಕೆ ತಡೆ ನೀಡಲಾಯಿತು.

ಕೊರೊನಾ ಭೀತಿ ನಡುವೆಯೇ ಟ್ರೆಂಡ್ ಆಯ್ತು ಹೊಸ ಉದ್ಯೋಗ!ಕೊರೊನಾ ಭೀತಿ ನಡುವೆಯೇ ಟ್ರೆಂಡ್ ಆಯ್ತು ಹೊಸ ಉದ್ಯೋಗ!

ಪಾಸ್ ಇದ್ದವರಿಗೆ ಮಾತ್ರ ತೆರಳಲು ಅವಕಾಶ ನೀಡಿದರು.ಅವರಿಗೆ ಬಿಡುತ್ತಿದ್ದೀರಿ ನಮಗ್ಯಾಕೆ ಬಿಡುತ್ತಿಲ್ಲ ಎಂದು ಸೈಕಲ್ ಹಾಗೂ ಬೈಕ್‌ನಲ್ಲಿ ತೆರಳುತ್ತಿದ್ದ ಕೆಲ ಕಾರ್ಮಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ದೆಹಲಿಯಲ್ಲಿ ಕೂಡ ಕೊರೊನಾ ವೈರಸ್ ಪ್ರಕರಣ ಹೆಚ್ಚಿದೆ, ಹರ್ಯಾಣಾದಲ್ಲಿ ಹಚ್ಚಾಗುತ್ತಿರುವ ಕಾರಣ ಅನಿವಾರ್ಯ ಕಾರಣಗಳಿಂದ ದೆಹಲಿ -ಗುರುಗ್ರಾಮ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು.

ಹರ್ಯಾಣಾದಲ್ಲಿ 1447 ಕೊರೊನಾ ಸಂಕಿತರಿದ್ದಾರೆ 19 ಮಂದಿ ಮೃತಪಟ್ಟಿದ್ದಾರೆ. ಒಂದು ವಾರದಲ್ಲಿ ಫರೀದಾಬಾದ್‌ನಲ್ಲಿ 98, ಜಜ್ಜಾರ್‌ನಲ್ಲಿ ಆರು, ಸೋನಿಪತ್‌ನಲ್ಲಿ 27, ಗುರುಗ್ರಾಮದಲ್ಲಿ 111 ಪ್ರಕರಣಗಳು ಪತ್ತೆಯಾಗಿತ್ತು.

ದೆಹಲಿಯಿಂದ ಹರ್ಯಾಣಕ್ಕೆ ತೆರಳುವವರಿಗೆ ಅನುಕೂಲಮಾಡಿಕೊಡಬೇಕು, ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಅದಾದ ಬಳಿಕ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

English summary
Massive traffic jam blocked the road connecting Delhi and Gurgaon this morning after the Haryana government decided to seal the routes that go to Delhi, concerned over rising cases of the highly infectious coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X