ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೆಹಲಿಯಲ್ಲಿ ವಿಶೇಷ ಮ್ಯಾರಥಾನ್
ನವದೆಹಲಿ, ಸೆ.21: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಡಿಸೆಂಬರ್ 16ರಂದು ದೆಹಲಿಯಲ್ಲಿ ವಿಶೇಷ ಆವೃತ್ತಿಯ ದೇಶದ ಅತಿದೊಡ್ಡ ಮ್ಯಾರಥಾನ್ 'ಸೋಲ್ಜರಥಾನ್' ಆಯೋಜಿಸಲಾಗಿದೆ.
ಯೋಧರು, ಮಾಜಿ ಯೋಧರು ಹಾಗೂ ಪೊಲೀಸ್ ಸಿಬ್ಬಂದಿಗಾಗಿ ಮತ್ತು ನಾಗರಿಕರಿಗಾಗಿ ಪ್ರತ್ಯೇಕ ಓಟವನ್ನು ಡಿಫೆನ್ಸ್ ಲವರ್ ಸಂಸ್ಥೆಯು ಆಯೋಜಿಸಿದೆ, ಬೆಳಗ್ಗೆ 4.45ಕ್ಕೆ ಮ್ಯಾರಥಾನ್ ಆರಂಭವಾಗಲಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧರಿಗೆ ಗೌರವ ಸಲ್ಲಿಸಲು ಈ ಓಟ ಹಮ್ಮಿಕೊಳ್ಳಳಾಗಿದೆ. ಕಳೆದ ವರ್ಷದಿಂದ ಈ ಓಟವನ್ನು ಆಯೋಜಿಸುತ್ತಿದ್ದು ಇದು ಎರಡನೇ ಆವೃತ್ತಿಯಾಗಿದೆ.

21.1 ಕಿ.ಮೀ ಪರಮವೀರ್ ಹಾಫ್ ಮ್ಯಾರಥಾನ್ 1250 ರೂ ನೋಂದಣಿ ಶುಲ್ಕವಿರುತ್ತದೆ, 10ಕಿ.ಮೀ ಮಹಾವೀರ್ ಮ್ಯಾರಥಾನ್ 1000 ರೂ., 5ಕಿ.ಮೀ ವೀರ ಮ್ಯಾರಥಾನ್ ಗೆ 750 ರೂ., 3 ಸಾವಿರ ಯೋಧರ ಸ್ಪಿರಿಟ್ ರನ್ ಗೆ 300ರೂ ನೋಂದಣಿ ಶುಲ್ಕವಿರುತ್ತದೆ. ಹೀಗೆ ವಿವಿಧ ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದೆ. ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
Entries open for India’s biggest marathon @Soldierathon in honour of Serving,Veterans & Wounded Bravehearts on Dec 16 in Delhi. It’s #VijayDiwas & be part of an inspiring event. Jai Hind 🇮🇳https://t.co/BXwJqtWE1Shttps://t.co/dDZtLQmNAv@MajorPoonia @akananth @billionbeatz pic.twitter.com/2YgelHXS29
— ✈Anantha Krishnan M✈ (@writetake) September 21, 2018












Click it and Unblock the Notifications