ನವದೆಹಲಿ: ನಾಲ್ಕಂತಸ್ತಿನ ವಸತಿ ಕಟ್ಟಡ ಕುಸಿದು 5 ಸಾವು
ನವದೆಹಲಿ ಜು. 19: : ರಾಜಧಾನಿ ದೆಹಲಿಯ ಪಶ್ಚಿಮ ಭಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು 5 ಜನ ಸಾವನ್ನಪ್ಪಿದ್ದು 13 ಜನರಿಗೆ ಗಂಭೀರ ಗಾಯಗಳಾಗಿದೆ.
ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ 4 ಅಂತಸ್ತಿನ ವಸತಿ ಕಟ್ಟಡವೊಂದು ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.[ಬೆಂಗಳೂರಲ್ಲಿ ಅಕ್ರಮ ಕಟ್ಟಡ ಕಟ್ಟಿದ್ರೆ ಏನಾಗುತ್ತದೆ?]

ಅವಶೇಷಗಳ ಅಡಿ ಇನ್ನು 10 ಜನ ಸಿಲುಕಿರುವ ಸಾಧ್ಯತೆಯಿದ್ದು 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 8 ಕ್ಕೂ ಹೆಚ್ಚು ಅಗ್ನಿಶಾಮಕದಳದ ತಂಡಗಳು ಮತ್ತು ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಘಟನಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಜನವಸತಿ ಪ್ರದೇಶದಲ್ಲೇ ಇಂಥ ಅವಘಡ ಸಂಭವಿಸಿರುವುದು ನಾಗರಿಕರಲ್ಲಿ ಭಯ ಹುಟ್ಟುಹಾಕಿದೆ. ಇದು ಕಾನೂನು ಬಾಹಿರವಾಗಿ ನಿರ್ಮಾಣವಾದ ಕಟ್ಟಡವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 2 ಲಕ್ಷ ರು. ಮತ್ತು ಗಾಯಾಳುಗಳಿಗೆ 50 ಸಾವಿರ ಪರಿಹಾರವನ್ನು ದೆಹಲಿ ಸರ್ಕಾರ ಘೋಷಣೆ ಮಾಡಿದೆ.


Click it and Unblock the Notifications
