ನವದೆಹಲಿ ವಿಧಾನಸಭಾ ಚುನಾವಣೆ: ಇದು 6th ಸೆನ್ಸ್ ತೆರೆದಿಟ್ಟ ಸೀಕ್ರೆಟ್!
ನವದೆಹಲಿ, ಫೆಬ್ರವರಿ.08: ರಾಷ್ಟ್ರ ರಾಜಧಾನಿಯಲ್ಲಿ ಚುರುಕಿನ ಮತದಾನ ನಡೆಯುತ್ತಿದ್ದರೆ ನಾಯಕರ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿ ಬಿಟ್ಟಿದೆ. ಇದರ ಮಧ್ಯೆ ದೆಹಲಿ ಬಿಜೆಪಿಯ ರಾಜ್ಯಾಧ್ಯಕ್ಷ ಮನೋಜ್ ತಿವಾರ್ ಸಿಕ್ಸ್ತ್ ಸೆನ್ಸ್ ಬಗ್ಗೆ ಮಾತನಾಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಏರುತ್ತದೆ ಎಂದು ನನ್ನ 6th ಸೆನ್ಸ್ ಹೇಳುತ್ತಿದೆ ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ. ಚುನಾವಣಾ ಮತಗಟ್ಟೆ ಬಳಿ ಮಾತನಾಡಿದ ಅವರು, ಈ ಬಾರಿ ತಮ್ಮ ಪಕ್ಷಕ್ಕೆ ಗೆಲುವಿನ ಮಾಲೆ ಬೀಳುವುದು ನಿಶ್ಚಿತ ಎಂದಿದ್ದಾರೆ.
ಈ ಹಿಂದೆಲ್ಲ ವಾರಣಾಸಿಯಲ್ಲೇ ನಮ್ಮ ತಾಯಿ ಇರುತ್ತಿದ್ದರು. ಮೊದಲ ಬಾರಿಗೆ ಫೆಬ್ರವರಿ.01 ನನ್ನ ಹುಟ್ಟುಹಬ್ಬ ಇದ್ದರಿಂದ ಅವರು ದೆಹಲಿಗೆ ಆಗಮಿಸಿದ್ದಾರೆ. ಇದರಿಂದ ಏಕಕಾಲದಲ್ಲೇ ಮೊದಲ ಬಾರಿ ನನ್ನ ತಾಯಿ ಮತ್ತು ದೆಹಲಿ ಪ್ರಜೆಗಳ ಆಶೀರ್ವಾದ ಸಿಕ್ಕಂತೆ ಆಗುತ್ತಿದೆ ಎಂದು ಮನೋಜ್ ತಿವಾರಿ ಸಂತಸ ವ್ಯಕ್ತಪಡಿಸಿದರು.

50ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೆಹಲಿ ಜನರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಇದರ ಬೆನ್ನಲ್ಲೇ ನಡೆಯುತ್ತಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications