ಎಸ್ ಐ ನಿಂದಿಸಿದ ಶಾಸಕಿ ಸರಿತಾ ಸಿಂಗ್ ವಿರುದ್ಧ ಕೇಸ್

ನವದೆಹಲಿ, ನ.23: ಆಮ್ ಆದ್ಮಿ ಪಕ್ಷದ ಶಾಸಕಿ ಸರಿತಾ ಸಿಂಗ್ ಅವರು ಕರ್ತವ್ಯ ನಿರತ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಅವರ ಜೊತೆ ಅನುಚಿತವಾಗಿ ವರ್ತಿಸಿ, ನಿಂದಿಸಿ, ಕಿರುಕುಳ ನೀಡಿದ ಆರೋಪ ಹೊತ್ತುಕೊಂಡಿದ್ದಾರೆ. ಶಾಸಕಿ ಸರಿತಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಭಾನುವಾರ ರಾತ್ರಿ ಸರಿತಾ ಸಿಂಗ್ ಅವರ ಕಾರು ಚಾಲಕ ಕ್ಷುಲ್ಲಕ ಕಾರಣಕ್ಕೆ ಸಬ್ ಇನ್ಸ್​ಪೆಕ್ಟರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಂತರ ಕಾರಿನಿಂದ ಕೆಳಗಿಳಿದ ಶಾಸಕಿ ಕೂಡಾ ಅವಾಚ್ಯ ಶಬ್ದಗಳಿಂದ ಕರ್ತವ್ಯನಿರತ ಅಧಿಕಾರಿಯನ್ನು ನಿಂದಿಸಿದ್ದಾರೆ ಎಂದು ದೂರು ದಾಖಲಿಸಿಕೊಳ್ಳಲಾಗಿದೆ.

Delhi: AAP MLA booked for 'misbehaving' with police official

ಹಲ್ಲೆಗೊಳಗಾದ ಸಬ್ ಇನ್ಸ್​ಪೆಕ್ಟರ್​ರನ್ನು ಓಮ್ ಪಾಲ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ವರದಿಯಂತೆ ಪಕ್ಷದ ಕಾರ್ಯಕರ್ತರೊಬ್ಬರ ಮದುವೆ ಹಿನ್ನೆಲೆಯಲ್ಲಿ ಭದ್ರತೆ ಸಂಬಂಧ ಓಮ್ ಪಾಲ್ ಅವರನ್ನು ನಿಯೋಜನೆ ಮಾಡಲಾಗಿತ್ತು. ಅವರಿಗೆ ಶಾಸಕಿ ಕಾರು ಇನ್ನೇನು ಗುದ್ದಿಬಿಡುತ್ತೆ ಎನ್ನುವಾಗ ಜಿಗಿದು ತಪ್ಪಿಸಿಕೊಂಡರು. ಬಳಿಕ ಇದನ್ನು ಶಾಸಕಿ ಚಾಲಕನ ಬಳಿ ಪ್ರಶ್ನಿಸಿದ್ದಕ್ಕೆ ಇಷ್ಟೊಂದು ಗಲಾಟೆಯಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಶಾಸಕಿ ಹಾಗೂ ಅವರ ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 186, 279, 506 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಎಫ್ ಐಆರ್ ಹಾಕಿ, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ವೀನು ಬನ್ಸಾಲ್ ತಿಳಿಸಿದ್ದಾರೆ.

ಆದರೆ ಶಾಸಕಿ ಮಾತ್ರ ಇದೆಲ್ಲಾ ಸುಳ್ಳು ಆರೋಪ ಎಂದು ತಳ್ಳಿಹಾಕಿದ್ದು, ಭಜನ್ ಪುರ ಪೊಲೀಸ್ ಠಾಣೆಯಲ್ಲಿ ಮರು ದೂರು ದಾಖಲಿಸುತ್ತೇನೆ. ಹಿರಿಯ ಅಧಿಕಾರಿಗಳು ಮೊದಲಿಗೆ ನನ್ನ ಹೇಳಿಕೆ ದಾಖಲಿಸಿಕೊಳ್ಳಲಿ ಎಂದಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+