ಜೆಎನ್‌ಯು ಭೇಟಿ ನಂತರ ಸ್ಕಿಲ್ ಇಂಡಿಯಾ ವಿಡಿಯೋದಿಂದ ದೀಪಿಕಾ ಔಟ್

ನವದೆಹಲಿ, ಜನವರಿ 10: ಜೆಎನ್‌ಯು ಭೇಟಿ ನೀಡಿ, ಜೆಎನ್‌ಯು ಹಿಂಸಾಚಾರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಗೆ ಬೆಂಬಲ ನೀಡಿದ ನಂತರ ದೀಪಿಕಾ ಪಡುಕೋಣೆಯನ್ನು ಸ್ಕಿಲ್ ಇಂಡಿಯಾ ವಿಡಿಯೋದಿಂದ ಕೈಬಿಡಲಾಗಿದೆ.

ಕೇಂದ್ರ ಸರ್ಕಾರದ ಸರ್ಕಾರಿ ಯೋಜನೆ ಸ್ಕಿಲ್ ಇಂಡಿಯಾ ದ ಪ್ರಚಾರ ವಿಡಿಯೋದಿಂದ ದೀಪಿಕಾ ಪಡುಕೋಣೆ ಅವರ ದೃಶ್ಯವನ್ನು ಕೈಬಿಡಲಾಗಿದೆ.

ಸ್ಕಿಲ್ ಇಂಡಿಯಾ ಪ್ರಚಾರ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ಆಸಿಡ್ ದಾಳಿಗೆ ತುತ್ತಾದವರ ಪರವಾಗಿ ಹಾಗೂ ಸ್ಕಿಲ್ ಇಂಡಿಯಾ ಯೋಜನೆ ಕುರಿತಾಗಿ ಮಾತನಾಡಿದ್ದರು. ಆದರೆ ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ ನಂತರ ಈ ದೃಶ್ಯಗಳನ್ನು ತೆಗೆದುಹಾಕಲಾಗಿದೆ.

Deepika Padukones Video Dropped From Skill India Promotional Video

ಪ್ರಚಾರ ವಿಡಿಯೋ ಚಿತ್ರೀಕರಣ ಮಾಡುವಾಗ ಈ ದೀಪಿಕಾ ಅಭಿನಯದ ದೃಶ್ಯ ಇತ್ತು. ಆದರೆ ಬುಧವಾರ ವಿಡಿಯೋ ಬಿಡುಗಡೆ ಆದಾಗ ದೀಪಿಕಾ ದೃಶ್ಯ ಅಥವಾ ದ್ವನಿ ವಿಡಿಯೋದಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಇಲ್ಲದೆ ಪ್ರಚಾರದ ವಿಡಿಯೋ ಬಿಡುಗಡೆ ಸಹ ಆಗಿದೆ.

ಸ್ಕಿಲ್ ಇಂಡಿಯಾ ಪ್ರಚಾರ ವಿಡಿಯೋದಲ್ಲಿ ಈ ಮೊದಲು ದೀಪಿಕಾ ಪಡುಕೋಣೆ ಅವರ 45 ಸೆಕೆಂಡ್‌ಗಳ ದೃಶ್ಯ ಇತ್ತು ಆದರೆ ಈಗ ಆ ದೃಶ್ಯಗಳನ್ನು ಕೈಬಿಡಲಾಗಿದೆ. 'ಸರ್ಕಾರವು ಆಸಿಡ್ ದಾಳಿ ಸಂತ್ರಸ್ತರಿಗೆ ದೇಶದ ಇತರ ನಾಗರೀಕರಂತೆಯೇ ಬದುಕುವ ಅವಕಾಶವನ್ನು ಕಲ್ಪಿಸಿದೆ' ಎಂದು ದೀಪಿಕಾ ಮಾತನಾಡಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ.

ದೀಪಿಕಾ ಅವರು ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದಕ್ಕೆ ಕೇಂದ್ರ ಸರ್ಕಾರ ಈ ರೀತಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಿಜೆಪಿ ಸರ್ಕಾರವು ತನ್ನ ವಿರೋಧಿಗಳನ್ನು ಹಣಿಯುವ ಯತ್ನ ಮಾಡುತ್ತಿದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+