24 ಗಂಟೆಗಳಲ್ಲಿ ಹೆಚ್ಚಲಿದೆ ಫ್ಯಾನಿ ಅಬ್ಬರ, ಒಡಿಶಾದಲ್ಲಿ ಹೈ ಅಲರ್ಟ್
ನವದೆಹಲಿ, ಏಪ್ರಿಲ್ 30: ಮುಂದಿನ 24 ಗಂಟೆಗಳಲ್ಲಿ ಫ್ಯಾನಿ ಚಂಡಮಾರುತದ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಫ್ಯಾನಿ ಅಬ್ಬರ ಕೊಂಚ ತಗ್ಗಿದ್ದು, ಕರ್ನಾಟಕದಲ್ಲಿ ಅದರ ಪರಿಣಾಮವಾಗಿ ಕೆಲವೆಡೆ ಮಳೆಯಾಗಿದೆ.
ಆದರೆ ಪಥ ಬದಲಿಸಿರುವ ಫ್ಯಾನಿ ಒಡಿಶಾದಲ್ಲಿ ಭಾರೀ ಮಳೆಯನ್ನುಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ಮುನ್ನೆಚ್ಚರಿಕೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟಿದೆ.

ಮೀನುಗಾರರಿಗೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮೇ 1, 2 ಮತ್ತು 3 ರಂದು ಒಡಿಶಾದ ಕರಾವಳಿ ಭಾಗಕ್ಕೆ ಈ ಚಂಡಮಾರುತ ಧಾವಿಸಲಿದ್ದು, ಅಲ್ಲಿ ಮೇ 3 ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 175 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications