ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕಂಪನಿ ಇಮೇಲ್ ದಾಳಿಗೆ 100 ಸರ್ಕಾರಿ ಕಂಪ್ಯೂಟರ್ ಹಾನಿ?

|
Google Oneindia Kannada News

ನವದೆಹಲಿ, ಸೆ. 18: ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಜಾಲಕೆ ಬೆಸೆದುಕೊಂಡಿರುವ 100 ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಇತ್ತೀಚೆಗೆ ಅತಿ ದೊಡ್ಡ ಮಾಲ್ವೇರ್ ದಾಳಿಗೆ ತುತ್ತಾಗಿದ್ದವು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಐಟಿ ಕಂಪನಿಯಿಂದ ಬಂದ ಇಮೇಲ್ ನಿಂದಾಗಿ ನೂರಾರು ಕಂಪ್ಯೂಟರ್ ಗಳಿಗೆ ಹಾನಿಯಾಗಿವೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

ದೆಹಲಿ ಪೊಲೀಸರ ಮೂಲಗಳ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಈ ಸೈಬರ್ ದಾಳಿ ಬೆಂಗಳೂರಿನ ಐಟಿ ಕಂಪನಿಯಿಂದ ಆಗಿದೆ ಎಂದು ತಿಳಿದು ಬಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉದ್ಯೋಗಿಯೊಬ್ಬರು ಬೆಂಗಳೂರು ಸಂಸ್ಥೆಯಿಂದ ಬಂದ ಇಮೇಲ್ ಓಪನ್ ಮಾಡುತ್ತಿದ್ದಂತೆ ಸಿಸ್ಟಮ್ ಇಮೇಲ್ ಡೇಟಾ ಅಳಿಸಿ ಹೋಗಿವೆ. ಇದೇ ಮಾದರಿಯಲ್ಲಿ ಎನ್‌ಐಸಿ ಮತ್ತು ಸಚಿವಾಲಯದ ನೂರಾರು ಕಂಪ್ಯೂಟರ್‌ಗಳ ಮೇಲೆ ದಾಳಿಯಾಗಿದೆ.

ಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್ಧಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್ಧ

ಪ್ರಾಕ್ಸಿ ಸರ್ವರ್‌ ಬಳಸಿ ಈ ಬಗ್ ವೊಂದನ್ನು ಇಮೇಲ್ ಗೆ ಅಟ್ಯಾಚ್ ಮಾಡಿ ಕಳಿಸಲಾಗಿದೆ. ಇಮೇಲ್ ಗೆ ಲಗತ್ತಿಸಿದ್ದ ಅಟ್ಯಾಚ್ಮೆಂಟ್ ಓಪನ್ ಮಾಡಿದಾಗ ಈ ಅನಾಹುತ ನಡೆದಿದೆ. ಎನ್ಐಸಿ ಜಾಲದಲ್ಲಿ ಪ್ರಧಾನಿ ಸಚಿವಾಲಯದಿಂದ ಹಿಡಿದು ಅತ್ಯಂತ ಗೌಪ್ಯ ಮಾಹಿತಿಗಳನ್ನು ಶೇಖರಿಸಿಟ್ಟಿರುವ ಕಂಪ್ಯೂಟರ್ ಗಳಿವೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಕೂಲಂಕುಷವಾಗಿ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Cyber Attack on 100 govt computers in major breach, email came from Bengaluru IT firm

Recommended Video

Drugs ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ DK Shivakumar | Oneindia Kannada

ಭಾರತೀಯ ರಾಜಕಾರಣಿಗಳು, ಉದ್ಯಮಿ, ಗಣ್ಯಾತಿಗಣ್ರ ಮೇಲೆ ಚೀನಾದ ಕಂಪನಿ, ಸರ್ಕಾರ ಕಣ್ಣಿಟ್ಟಿದೆ ಎಂಬ ವರದಿಗಳು ಇತ್ತೀಚೆಗೆ ಬಂದಿತ್ತು. ಆದ್ದರಿಂದ ಈ ಪ್ರಕರಣ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

English summary
Cyber Attack on 100 government computers of the National Informatics Centre (NIC) in major breach, email came from Bengaluru IT firm says Delhi Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X