ಭಾರತದಲ್ಲಿ 300ರ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ನವದೆಹಲಿ, ಮಾರ್ಚ್.21: ಚೀನಾದಲ್ಲಿ ರಣಕೇಕೆ ಹಾಕಿದ ಕೊರೊನಾ ವೈರಸ್ ಅಬ್ಬರ ಕೊಂಚ ಕಮ್ಮಿಯಾಗಿದೆ. ನೆರೆಯ ಇಟಲಿ ದೇಶದಲ್ಲಿ ದಿನೇ ದಿನೆ ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆ ಸಾವಿರದ ಸನ್ನಿಹಿತಕ್ಕೆ ಬಂದಿದೆ. ಇದರ ಮಧ್ಯೆ ಭಾರತದಲ್ಲಿ ಸೋಂಕಿತರ ಸಂಖ್ಯೆ 300ರ ಗಡಿಗೆ ಸಮೀಪಿಸುತ್ತಿದೆ.

ಶನಿವಾರ ಒಂದೇ ದಿನ ದೇಶದಲ್ಲಿ 38 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಪೈಕಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಪಂಜಾಬ್ ನಲ್ಲಿ ಗುರುವಾರ 72 ವರ್ಷದ ವ್ಯಕ್ತಿಯು ಇದೇ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು. ಈ ಸೋಂಕಿತನ ಸಂಬಂಧಿಕರಿಗೆ ಕೊವಿಡ್-19 ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಇಂದು ಪಂಜಾಬ್ ನಲ್ಲಿ ಪತ್ತೆಯಾದ ಏಳು ಸೋಂಕಿತ ಪ್ರಕರಣಗಳಲ್ಲಿ ಆರು ಸೋಂಕಿತರು ಒಂದೇ ಕುಟುಂಬಕ್ಕೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.

Coronavirus Infected Cases Cross 300 In India

ಮಹಾರಾಷ್ಟ್ರದಲ್ಲಿ 63ಕ್ಕೆ ಏರಿದ ಸೋಂಕಿತರ ಸಂಖ್ಯೆ:

ಮಹಾರಾಷ್ಟ್ರದ ಮುಂಬೈನಲ್ಲಿ ಶನಿವಾರ 10 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಪುಣೆಯಲ್ಲಿ ಒಬ್ಬ ಸೋಂಕಿತ ಪತ್ತೆಯಾಗಿದ್ದಾನೆ. ಇದರಿಂದ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯು 63ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಮೂವರಿಗೆ ಕೊರೊನಾ ವೈರಸ್ ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆಯು 6ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ನಾಲ್ವರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+