ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ನವದೆಹಲಿ, ಮಾರ್ಚ್ 28: ಕೊರೊನಾ ವೈರಸ್ ಸೋಂಕು (ಕೋವಿಡ್ 19) ಭಾರತದಲ್ಲಿ ಮೂರನೇ ಹಂತ ತಲುಪಲಿದೆ ಎಂಬ ಆಘಾತಕಾರಿ ವರದಿಗಳ ನಡುವೆ, ಕೇಂದ್ರ ಸರ್ಕಾರ ಸೋಂಕು ಹರಡುವುದನ್ನು ತಡೆಯುವಲ್ಲಿ ಸಮರೋಪಾದಿಯ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಕೋವಿಡ್ 19 ರೋಗಕ್ಕೆ ತುತ್ತಾದ ರೋಗಿಗಳ ತುರ್ತು ಚಿಕಿತ್ಸೆಗೆ ರೈಲ್ವೆ ಬೋಗಿಗಳನ್ನು ಪ್ರತ್ಯೇಕ ವಾರ್ಡಗಳಾಗಿ ಭಾರತೀಯ ರೈಲ್ವೆ ಪರಿವರ್ತಿಸಿದೆ.

ರೈಲ್ವೆಯ ಈ ಪ್ರತ್ಯೇಕ ವಾರ್ಡ್ ಗಳಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಯಶಸ್ವಿಯಾದರೆ ಪ್ರತಿ ರೈಲ್ವೆ ವಲಯಗಳ ರೈಲುಗಳಲ್ಲಿ ಪ್ರತಿವಾರ 10 ಬೋಗಿಗಳನ್ನು ಇದಕ್ಕೆ ಬಳಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ಬೋಗಿಯಯನ್ನು ಮಾರ್ಪಾಡು ಮಾಡಲಾಗುತ್ತಿದೆ

ಬೋಗಿಯಯನ್ನು ಮಾರ್ಪಾಡು ಮಾಡಲಾಗುತ್ತಿದೆ

ರೈಲು ಬೋಗಿಗಳನ್ನು ಅತ್ಯಾಧುನಿಕ ಪ್ರತ್ಯೇಕ ವಾರ್ಡ್ ಗಳನ್ನಾಗಿ ಮಾಡಲು ಬೋಗಿಯಯನ್ನು ಮಾರ್ಪಾಡು ಮಾಡಿ, ಪ್ಲೈವುಡ್ ಜೋಡಿಸಿ ಆಸ್ಪತ್ರೆಯ ರೀತಿ ವಾರ್ಡ್ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಪ್ರತಿ ಬೋಗಿಯಲ್ಲಿರುವ ನಾಲ್ಕು ಶೌಚಾಲಯಗಳನ್ನು ಎರಡು ಬಾತ್ ರೂಂಗಳಾಗಿ ಬದಲಾಯಿಸಿ ಅಲ್ಲಿ ಹ್ಯಾಂಡ್ ಶವರ್, ಬಕೆಟ್ ಮತ್ತು ಮಗ್ ಗಳನ್ನು ಇಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

10 ಐಸೊಲೇಷನ್ ವಾರ್ಡ್ ಗಳಿರುತ್ತದೆ

10 ಐಸೊಲೇಷನ್ ವಾರ್ಡ್ ಗಳಿರುತ್ತದೆ

ಪ್ರತಿ ಬೋಗಿಯಲ್ಲಿ 10 ಐಸೊಲೇಷನ್ ವಾರ್ಡ್ ಗಳಿರುತ್ತದೆ. ವೈದ್ಯಕೀಯ ಉಪಕರಣಗಳನ್ನು ಜೋಡಿಸಿಕೊಳ್ಳಲು ರೈಲ್ವೆ 220 ವೋಲ್ಟ್ ಎಲೆಕ್ಟ್ರಿಕಲ್ ಪಾಯಿಂಟ್ ಗಳನ್ನು ಪ್ರತಿ ಬೋಗಿಗಳಲ್ಲಿ ಒದಗಿಸಿ ಅಲ್ಲಿ ಗಾಳಿ ಪರದೆ ಮೂಲಕ ಒಬ್ಬ ರೋಗಿಯಿಂದ ಮತ್ತೊಬ್ಬ ರೋಗಿಯನ್ನು ಪ್ರತ್ಯೇಕಿಸಲಾಗುತ್ತದೆ. ಹೊರಗಿನಿಂದ 415 ವೋಲ್ಟ್ ಗಳನ್ನು ರೈಲ್ವೆ ಇಲಾಖೆ ಒದಗಿಸಲಿದೆ.

ಇದು ಅತಿ ಕೆಟ್ಟ ಸಮಯ

ಇದು ಅತಿ ಕೆಟ್ಟ ಸಮಯ

ಈಗ ಭಾರತ ಕೊರೊನಾ ವೈರಸ್ ಭೀಕರತೆಯ 3ನೇ ಹಂತದಲ್ಲಿದೆ. ದೇಶದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈಗ ಮೂರನೇ ಹಂತವನ್ನು ತಲುಪಿದ್ದೇವೆ. ಈಗ ನೇರವಾಗಿ ವಿದೇಶದಿಂದ ಬಂದಿರುವವರೊಂದಿಗೆ ಸಂಪರ್ಕ ಇಲ್ಲದವರಿಗೂ ಕೊರೊನಾ ಹರಡಿದೆ. ಇದು ಅತಿ ಕೆಟ್ಟ ಸಮಯ ಎಂದು ಹೇಳಿದ್ದಾರೆ.

ಸಾವಿರ ದಾಟುವ ಹಂತದಲ್ಲಿ

ಸಾವಿರ ದಾಟುವ ಹಂತದಲ್ಲಿ

ಭಾರತದಲ್ಲಿ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ ಸಾವಿರದ ಸನಿಹದಲ್ಲಿದೆ. ಶುಕ್ರವಾರದ ಮಧ್ಯಾಹ್ನಕ್ಕೆ 933 ಜನಕ್ಕೆ ಬಾರತದಲ್ಲಿ ಸೋಂಕು ತಗುಲಿ 20 ಜನ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ತಗುಲಿದವರಿಗೆ ಸೂಕ್ತ ಚಿಕಿತ್ಸೆ ಕೊಡಲು ಸರ್ಕಾರ ಪರದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+