ಹರಿಯಾಣ ಮತ್ತು ಪಶ್ಚಿಮ ಬಂಗಾಳಕ್ಕೂ ಕಾಲಿಟ್ಟ ಕೊರೊನಾ

ನವದೆಹಲಿ, ಮಾರ್ಚ್ 18: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು, ನಿನ್ನೆ (ಮಂಗಳವಾರ, ಮಾರ್ಚ್ 17) ಪಶ್ಚಿಮ ಬಂಗಾಳ, ಪುದುಚೆರಿ ಮತ್ತು ಹರಿಯಾಣದಲ್ಲಿ ಮೊಟ್ಟ ಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

Recommended Video

      Covid 19 : First human trial of vaccine begins in US | Vaccination trail | Oneindiakannada

      ಇಂಗ್ಲೆಂಡ್ ನಿಂದ ವಾಪಸ್ ಆಗಿದ್ದ 18 ವರ್ಷದ ಯುವಕನಿಗೆ ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಪುದುಚೆರಿಯಲ್ಲಿ 68 ವರ್ಷದ ಮಹಿಳೆಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

      ಇನ್ನೂ ಹರಿಯಾಣದಲ್ಲಿ ಗುರುಗ್ರಾಮದ 29 ವರ್ಷದ ಮಹಿಳೆ ಕೂಡ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಮಹಿಳೆ ಮಲೇಶಿಯಾ ಮತ್ತು ಇಂಡೋನೇಷ್ಯಾದಿಂದ ಇತ್ತೀಚೆಗೆಷ್ಟೇ ಭಾರತಕ್ಕೆ ವಾಪಸ್ ಆಗಿದ್ದರು.

      Coronavirus: Bengal, Haryana report 1st cases

      ಭಾರತದಲ್ಲಿ ಇಲ್ಲಿಯವರೆಗೂ ಒಟ್ಟು 139 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಭಾರತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+