ಲೈಂಗಿಕ ಕಿರುಕುಳ ಆರೋಪಿತ ಕಾಂಗ್ರೆಸ್ಸಿಗನಿಗೆ ಜಾಮೀನು, ರಮ್ಯಾ ಟ್ವೀಟ್

ನವದೆಹಲಿ, ಜುಲೈ 31 : ಮಾಜಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಹೊತ್ತು, ಬಂಧಿತರಾಗಿದ್ದ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ದೆಹಲಿ ಘಟಕದ ಸಿಬ್ಬಂದಿಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದು ಬಿಡುಗಡೆಯಾದ ಮಾಜಿ ಸಿಬ್ಬಂದಿ ಬಗ್ಗೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಟ್ವೀಟ್ ಮಾಡಿದ್ದಾರೆ.

ಎಐಸಿಸಿ ಸಾಮಾಜಿಕ ಜಾಲ ತಾಣ ಹಾಗೂ ಡಿಜಿಟಲ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಈ ಕುರಿತಂತೆ ಟ್ವೀಟ್ ಮಾಡಿ, ಮಾಜಿ ಉದ್ಯೋಗಿ ಅವರ ಮೇಲಿನ ಆಪಾದನೆ ಬಗ್ಗೆ ಕಾಂಗ್ರೆಸ್ ಆಂತರಿಕವಾಗಿ ತನಿಖೆ ಕೈಗೊಳ್ಳಲಾಗಿದೆ. ಈ ಬಗ್ಗೆ ಸಮಿತಿಯನ್ನು ರಚಿಸಲಾಗಿದ್ದು, ದೂರಿನ ಅಂಶಗಳನ್ನು ಪರಿಗಣಿಸಿ, ಪಾರದರ್ಶಕ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಮಾಜಿ ಉದ್ಯೋಗಿ ಆರೋಪಗಳಲ್ಲಿ ಹುರುಳಿಲ್ಲ. ಹಾಲಿ ಉದ್ಯೋಗಿ ಪರ 39 ಜನ ಇತರೆ ಸದಸ್ಯರು ಸಹಿ ಹಾಕಿ, ಸನ್ನಡತೆಯ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ರಮ್ಯಾ ಅವರು

Congress Social Media Member Arrested For Sexual Harassment, Gets Bail

ಏನಿದು ಪ್ರಕರಣ: ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ರಮ್ಯಾ ಅವರ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವ್ಯಕ್ತಿ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ತಮಗಾದ ನೋವಿನ ಬಗ್ಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದೆ ಎಂದಿದ್ದಾರೆ. ಈ ಬಗ್ಗೆ ರಮ್ಯಾ ಅವರು ಯಾವುದೇ ಕ್ರಮ ಜರುಗಿಸದ ಕಾರಣ, ವಿಧಿ ಇಲ್ಲದೆ ಪೊಲೀಸರ ನೆರವು ಕೋರಿದ್ದಾರೆ.

ದೆಹಲಿಯ ನಾರ್ಥ್ ಅವಿನ್ಯೂ ಪೊಲೀಸ್ ಠಾಣೆಯಲ್ಲಿ ಚಿರಾಗ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354 ಎ ಹಾಗೂ 509ರ ಅನ್ವಯ ಎಫ್ಐಆರ್ ಹಾಕಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+