ಅರುಣ್ ಜೇಟ್ಲಿ ಜೊತೆ ಜಗಳಕ್ಕಾಗಿ ಕಾಯುತ್ತಿದ್ದೇನೆ: ಶಶಿ ತರೂರ್

Recommended Video

      ಅರುಣ್ ಜೇಟ್ಲಿ ಜೊತೆ ಜಗಳಕ್ಕಾಗಿ ಕಾಯುತ್ತಿದ್ದೇನೆ: ಶಶಿ ತರೂರ್ | Oneindia Kannada

      ನವದೆಹಲಿ, ಆಗಸ್ಟ್ 12: ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಮುಖಂಡ, ಸಂಸದ ಅರುಣ್ ಜೇಟ್ಲಿ ಅವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, "ಅವರೊಂದಿಗೆ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ಕಿತ್ತಾಡಲು ನಾನು ಕಾಯುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

      "ನನ್ನ ವಿಶ್ವವಿದ್ಯಾಲಯದ ಸಮಕಾಲೀನ, ಗೆಳೆಯ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಏಮ್ಸ್ ವರದಿ ತಿಳಿಸಿದೆ. ಅವರು ಬಹುಬೇಗನೇ ಮತ್ತು ಸಂಪೂರ್ಣವಾಗಿ ಗುಣಮುಖರಾಗಲಿ. ಅವರೊಂದಿಗೆ ಮತ್ತೆ ರಾಜಕೀಯ ಖಡ್ಗ ಬೀಸಲು ನಾನು ಕಾಯುತ್ತಿದ್ದೇನೆ" ಎಂದು ಶಶಿ ತರೂರ್ ಹೇಳಿದ್ದಾರೆ.

      ಕೆಲವು ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಅರುಣ್ ಜೇಟ್ಲಅವರು ಈ ಬಾರಿ ಎನ್ ಡಿಎ ಸಂಪುಟಕ್ಕೂ ಅದೇ ಕಾರಣದಿಂದಲೇ ಸೇರಿರಲಿಲ್ಲ. ಶುಕ್ರವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜೇಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ಆಸ್ಪತ್ರೆ ತಿಳಿಸಿದೆ.

      Congress MP Shashi Taroor Wishes Arun Jaitleys Speedy Recovery.

      ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಿರಿಯರು ಏಮ್ಸ್ ಗೆ ಭೇಟಿ ನೀಡಿ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದಾರೆ.

      ಕಳೆದ ವರ್ಷವಷ್ಟೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಅರುಣ್ ಜೇಟ್ಲಿ, ತಮಗೆ ವಿಶ್ರಾಂತಿಯ ಅಗತ್ಯವಿದೆ ಎಂಬ ಕಾರಣದಿಂದಲೇ ಮೋದಿ ಸಂಪುಟದಿಂದ ಆಚೆ ಉಳಿದಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+