ಗೌರವ್ ಗೊಗೋಯ್‌ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕನ ಪಟ್ಟ

ನವದೆಹಲಿ, ಆಗಸ್ಟ್ 27: ಕಾಂಗ್ರೆಸ್ ಅಧ್ಯಕ್ಷರ ನೇಮಕದ ಗೊಂದಲದ ನಡುವೆಯೇ ಲೋಕಸಭೆಗೆ ಕಾಂಗ್ರೆಸ್‌ನ ಉಪನಾಯಕ ಹಾಗೂ ವಿಪ್ ನೇಮಿಸಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಅಸ್ಸಾಂ ಮಾಜಿ ಮುಖ್ಯಮಂತ್ರಿ ಅರುಣ್ ಗೊಗೋಯ್ ಪುತ್ರ ಗೌರವ್ ಗೊಗೋಯ್ ಅವರನ್ನು ಉಪ ನಾಯಕರನ್ನಾಗಿಯೂ ಹಾಗೂ ಲುಧಿಯಾನ ಸಂಸದೆ ರವನೀತ್ ಸಿಂಗ್ ಬಿಟ್ಟು ಅವರನ್ನು ವಿಪ್ ಆಗಿಯೂ ನೇಮಿಸಲಾಗಿದೆ.

ಈ ಬೆಳವಣಿಗೆಯನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹಾಗೂ ಮುಖ್ಯ ವಿಪ್ ಕೆ ಸುರೇಶ್ ಖಾತ್ರಿಪಡಿಸಿದ್ದಾರೆ.

Congress Appoints Gaurav Gogoi As Deputy Leader In Lok Sabha

ಮುಂಬರುವ ಮುಂಗಾರು ಅಧಿವೇಶನದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಮೂಡಿಸಲು ಈ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಲ್ಲಿಯವರೆಗೂ ಕಾಂಗ್ರೆಸ್ ಲೋಕಸಭೆಯಲ್ಲಿ ಉಪನಾಯಕರನ್ನು ಹೊಂದಿರಲಿಲ್ಲ, ಮುಂದಿನ ವರ್ಷ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದಕ್ಕಾಗಿಯೇ ಈ ಹೊಸ ನೇಮಕ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ. ಇನ್ನು ಬಿಟ್ಟು ಅವರು ಲುಧಿಯಾನದಲ್ಲಿ ಸತತ ಮೂರು ಬಾರಿ ಸಂಸದೆ ಯಾಗಿದ್ದಾರೆ.

ಈ ಹೊಸ ನೇಮಕವು ಪಕ್ಷಕ್ಕೆ ಹೇಗೆ ಚೈತನ್ಯ ಮೂಡಿಸಲಿದೆ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+